ವಿಶೇಷ ವರದಿ: ರಹೀಂ ಉಜಿರೆ
ಉಡುಪಿ: ಕಟ್ಟಡ ನಿರ್ಮಾಣಕ್ಕೆ ಮರಳು ಅತ್ಯಗತ್ಯ. ಆದರೆ ಉಡುಪಿ ಜಿಲ್ಲೆಯಲ್ಲಿ ಮರಳುಗಾರಿಕೆ ನಿಷೇಧ ಇದೆ. ಹೀಗಾಗಿ ಮುಂದಿನ ದಿನಗಳಲ್ಲಿ ಮರಳು ದರ ಏರಿಕೆ ಆಗುವ ಸಾಧ್ಯತೆ ಇದ್ದು, ಮರಳುಗಾರಿಕೆ ವೃತ್ತಿಯನ್ನು ಅವಲಂಬಿಸಿದವರು ಸಂಕಷ್ಟ ಪಡುವಂತಾಗಿದೆ.
ಉಡುಪಿಯಲ್ಲಿ ಮರಳುಗಾರಿಕೆಗೆ ಕೋರ್ಟ್ ನಿಷೇಧ ಹೇರಿದೆ. ಹೀಗಾಗಿ ಮರಳುಗಾರಿಕೆ ನಿಂತಿದ್ದು ಉಡುಪಿ ಜಿಲ್ಲೆಯಲ್ಲಿ ಮರಳು ದರದಲ್ಲಿ ಏರಿಕೆ ಕಂಡಿದೆ. ಮರಳುಗಾರಿಕೆ ನಿಷೇಧ ಇರುವ ಕಾರಣದಿಂದ ಕಟ್ಟಡ ಕೆಲಸಗಳಿಗೂ ತೊಡಕು ಉಂಟಾಗಿದೆ. ಹೆಚ್ಚು ಹಣ ಕೊಟ್ಟು ಮರಳು ಖರೀದಿ ಮಾಡುವ ಅನಿವಾರ್ಯತೆ ಉಂಟಾಗಿದ್ದು, ಜನ ಸಂಕಷ್ಟ ಪಡುವಂತಾಗಿದೆ. ಅಲ್ಲದೇ ಮರಳು ಸಾಗಾಟ ಮಾಡುವ ಲಾರಿ ಚಾಲಕ, ಮಾಲಿಕರು ಸದ್ಯ ವ್ಯವಹಾರ ಇಲ್ಲದೇ ಕಂಗೆಟ್ಟಿದ್ದಾರೆ. ಮರಳು ಸಾಗಾಟ ಇಲ್ಲದೇ ಜೀವನ ನಡೆಸೋದೆ ಕಷ್ಟ ಎನ್ನುತ್ತಿದ್ದಾರೆ.
ಉಡುಪಿ ಜಿಲ್ಲೆಯಲ್ಲಿ ಸಿಆರ್‌ಝಡ್ ವ್ಯಾಪ್ತಿಯಲ್ಲಿ ಹಿಂದೆ ನಡೆದ ಮರಳುಗಾರಿಕೆಯಲ್ಲಿ ಅಕ್ರಮ ಭ್ರಷ್ಟಾಚಾರ ನಡೆದಿದೆ. ಇದನ್ನು ಸರ್ಕಾರ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆ ನೀಡಬೇಕು ಅಂತ ಲಾರಿ, ಟೆಂಪೋ ಮಾಲಕರ ಸಂಘಟನೆಯಿಂದ ಆಗ್ರಹ ಕೇಳಿ ಬಂದಿದೆ..
ಒಟ್ನಲ್ಲಿ, ಉಡುಪಿ ಜಿಲ್ಲೆಯಲ್ಲಿ ಸದ್ಯ ಮರಳುಗಾರಿಕೆ ನಿಷೇಧ ಇರೋ ಕಾರಣದಿಂದ, ಜನ ಸಾಮಾನ್ಯರುಗೂ ಕಷ್ಟ ಎದುರಾಗುವ ಸಾಧ್ಯತೆ ಇದೆ. ಹೀಗಾಗಿ ಸರ್ಕಾರ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎನ್ನುವ ಆಗ್ರಹ ಕೇಳಿ ಬಂದಿದೆ.
PublicNext
08/06/2022 05:28 pm