ಉಡುಪಿ: ಮೂರು ದಿನಗಳ ಹಿಂದೆ ಉಡುಪಿಯಲ್ಲಿ ಶೂಟ್ ಮಾಡಿ ಆತ್ಮಹತ್ಯೆ ಮಾಡಿಕೊಂಡ ಪೊಲೀಸ್ ಕಾನ್ ಸ್ಟೇಬಲ್ ರಾಜೇಶ್ ಕುಂದರ್ ಅವರದ್ದು ಎನ್ನಲಾದ ,ಆಡಿಯೋ ಒಂದು ಇದೀಗ ವೈರಲ್ ಆಗುತ್ತಿದೆ.ನನಗೆ ಯಾರೋ ಹೊಡೆದಿದ್ದಾರೆ ,ನಾನೀಗ ಗಂಗೊಳ್ಳಿ ಸಮೀಪ ಬರಿ ಮೈಯಲ್ಲಿ ಬರ್ತಾ ಇದ್ದೇನೆ.ನನಗೆ ಎಲ್ಲ ಒಟ್ಟು ಸೇರಿ ಹೊಡೆದಿದ್ದಾರೆ...ನನಗೆ ಟಾರ್ಚರ್ ಕೊಡ್ತಿದಾರೆ ಎಂದು ಈ ಆಡಿಯೋದಲ್ಲಿ ರಾಜೇಶ್ ಕುಂದರ್ ಏದುಸಿರು ಬಿಡುತ್ತಾ ಹೇಳುತ್ತಿದ್ದಾರೆ...ಇವರ ಆತ್ಮಹತ್ತೆಗೆ ಸಂಬಂಧಿಸಿ ಮೂವರು ಪೊಲೀಸರ ವಿರುದ್ಧ ಈಗಾಗಲೇ ಆತ್ಮಹತ್ಯೆ ಪ್ರಚೋದನೆ ಕೇಸ್ ದಾಖಲಾಗಿದೆ. ಈ ಆಡಿಯೋ ಪೊಲೀಸರಿಗೆ ಮಹತ್ವದ ಪುರಾವೆ ಆಗುವ ಸಾಧ್ಯತೆ ಇದೆ.
PublicNext
03/05/2022 11:04 am