ಕಡಬ: ಕೋಲ್ಕತ್ತಾ ಪೊಲೀಸರಿಂದ ಬಂಧಿತರಾಗಿದ್ದ ಕಡಬ ನೂಜಿಬಾಳ್ತಿಲದ ಯುವಕ ಸಂಜಯ್ ಕೃಷ್ಣಗೆ ಅಲ್ಲಿನ ನ್ಯಾಯಾಲಯ ಸೆ.7 ರಂದು ಜಾಮೀನು ನೀಡಿದೆ.
ಸಂಜಯ್ ಕೃಷ್ಣ ಬೆಂಗಳೂರಿನಲ್ಲಿ ವ್ಯಾಸಂಗ ಮಾಡುತ್ತಿರುವ ಪಶ್ಚಿಮ ಬಂಗಾಳದ ಸುಲಘ್ನ ರಾಯ್ ಚೌಧುರಿ ಎಂಬವರ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್ ಮಾಡಿದ್ದ. ಈ ಪ್ರಕರಣಕ್ಕೆ ಸಂಬಂಧಿಸಿ ಕೋಲ್ಕತ್ತಾ ಪೋಲಿಸರಿಂದ ಸೆ.4ರಂದು ಕಡಬದಲ್ಲಿ ಸಂಜಯ್ ಕೃಷ್ಣನನ್ನು ಬಂಧಿಸಿದ್ದರು.
ಈ ಸಂಬಂಧ ಸೆಕ್ಷನ್ 354 ಐಪಿಸಿ & 272, 500, 506, 507, 509 ಅನ್ವಯ ಪ್ರಕರಣ ದಾಖಲಾಗಿದ್ದು, ಪಶ್ಚಿಮ ಬಂಗಾಳದ ಉತ್ತರ 24 ಪಾರ್‌ಗಾನ ನ್ಯಾಯಾಲಯವು ಸಂಜಯ್ ಬಂಧನಕ್ಕೆ ವಾರಂಟ್ ಹೊರಡಿಸಿತ್ತು. ಈ ಹಿನ್ನಲೆಯಲ್ಲಿ ಅಲ್ಲಿನ ಪೊಲೀಸರು ಸಂಜಯ್ ಕೃಷ್ಣ ಅವರು ಬಳಸುತ್ತಿದ್ದ ಮೊಬೈಲ್ ಲೋಕೇಷನ್ ಜಾಡು ಹಿಡಿದು ಕಡಬಕ್ಕೆ ಆಗಮಿಸಿ ಆರೋಪಿಯನ್ನು ಕಡಬದಲ್ಲಿ ಬಂಧಿಸಿ ಬಳಿಕ ಪುತ್ತೂರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಅಲ್ಲಿ ಜಾಮೀನು ನಿರಾಕರಿಸಿದರಿಂದ ಬಳಿಕ ಪಶ್ಚಿಮ ಬಂಗಾಳಕ್ಕೆ ಸಂಜಯ್ ಕೃಷ್ಣನನ್ನು ಕೊಂಡೊಯ್ಯಲಾಗಿತ್ತು. ಇದೀಗ ಸೆ.7ರಂದು ಅಲ್ಲಿನ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯ ಅವರಿಗೆ ಜಾಮೀನು ನೀಡಿದೆ ಎಂದು ಸಂಜಯ್ ಕೃಷ್ಣ ಕುಟುಂಬ ಮೂಲದಿಂದ ತಿಳಿದುಬಂದಿದೆ.
Kshetra Samachara
08/09/2021 09:57 am