ಪುತ್ತೂರು: ಹೈದರಾಬಾದಿನ ದಲಿತ ಯುವತಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಡಿಯಲ್ಲಿ ಆಂಧ್ರ ಪೊಲೀಸರು ಪುತ್ತೂರಿನ ಎಸ್ ಡಿಪಿಐ ಮುಖಂಡನ ಮಗನನ್ನು ಬಂಧಿಸಿದ್ದಾರೆ. ಬಂಧಿತನನ್ನು ಪುತ್ತೂರು ತಾಲೂಕಿನ ಚಿಕ್ಕಮುಡ್ನೂರು ಗ್ರಾಮದ ಮೊಹಮ್ಮದ್ ಫೈಝಲ್ ಎಂದು ಗುರುತಿಸಲಾಗಿದೆ.
ಈತ ಎಸ್.ಡಿ.ಪಿ.ಐ. ಪಕ್ಷದ ಮುಖಂಡ ಅಬ್ದುಲ್ ಹಮೀದ್ ಸಾಲ್ಮರ ಇವರ ಪುತ್ರನಾಗಿದ್ದಾನೆ. ವಿಪರ್ಯಾಸವೆಂದರೆ ಈತನ ತಂದೆ ಹತ್ರಾಸ್ ಘಟನೆ ಖಂಡಿಸಿ ಪುತ್ತೂರಿನಲ್ಲಿ ನಡೆದ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.
ಆರೋಪಿ ಫೈಝಲ್ ಗೆ ಇನ್ ಸ್ಟಾಗ್ರಾಮ್ ನಲ್ಲಿ ಯುವತಿ ಪರಿಚಯವಾಗಿದ್ದಳು. ಇವರಿಬ್ಬರ ಮಧ್ಯೆ ದೈಹಿಕ ಸಂಬಂಧ ಕೂಡಾ ಆಗಿತ್ತು. ಆದರೆ, ಇದೇ ವೇಳೆ ಈತ ಭಾವಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಡುವುದಾಗಿ ಬೆದರಿಸಿದ್ದ. ಹೀಗಾಗಿ ಯುವತಿ ಆಂಧ್ರಪ್ರದೇಶ ಪೊಲೀಸರಿಗೆ ದೂರು ನೀಡಿದ್ದಳು.
Kshetra Samachara
07/10/2020 11:40 am