ಕಾವಾಡಿ: ಉಡುಪಿ ಜಿಲ್ಲೆಯ ಕಾವಾಡಿಯ ವಕೀಲ ಸುಕುಮಾರ್ ಶೆಟ್ಡಿ ಎಂಬಾತ ಯುವತಿಯೋರ್ವಳನ್ನು ಐದು ವರ್ಷ ಪ್ರೀತಿಸುವ ನಾಡಕವಾಡಿ,ಆಕೆಯನ್ನು ಬಲತ್ಕಾರ ಮಾಡಿ ಈಗ ಮದುವೆಯಾಗಲು ನಿರಾಕರಿಸುತ್ತಿದ್ದಾನೆ ಎಂದು ಯುವತಿಯ ಸಂಬಂಧಿ ಆರೋಪಿಸಿದ್ದಾರೆ.
ಈ ಸಂಬಂಧ ಇಂದು ಯುವತಿಯ ಭಾವ ಉಮೇಶ್ ಎಂಬುವರು ಉಡುಪಿ ಪ್ರೆಸ್ ಕ್ಲಬ್ ನಲ್ಲಿ ಮಾಹಿತಿ ನೀಡಿದರು.2015 ರಿಂದ ಕಾವಾಡಿಯ ಸುಕುಮಾರ್ ಶೆಟ್ಟಿ ಎಂಬಾತ ನನ್ನ ನಾದಿನಿಯನ್ನು ಪ್ರೀತಿಸುತ್ತಿದ್ದ.
ವೃತ್ತಿಯಲ್ಲಿ ಆತ ವಕೀಲ.ಯುವತಿಯನ್ನು ಮದುವೆಯಾಗುವುದಾಗಿ ನಂಬಿಸಿ ಐದು ವರ್ಷ ಕಾಲ ಆಕೆಯನ್ನು ಬಲತ್ಕಾರ ಮಾಡಿದ್ದಾನೆ.ಪ್ರೀತಿಸುವ ವಿಷಯ ಎರಡೂ ಮನೆಯವರಿಗೆ ತಿಳಿದಿತ್ತು.
ಆದರೆ ಈ ವರ್ಷ ಫೆವ್ರವರಿ ನಂತರ ಆತ ಮದುವೆಯಾಗಲು ನಿರಾಕರಿಸಿದ್ದಲ್ಲದೆ,ಯುವತಿಯ ಫೋನ್ ಸಂಪರ್ಕಕ್ಕೂ ಸಿಗುತ್ತಿಲ್ಲ.
ಪ್ರೀತಿಸುವಾಗ ಇಲ್ಲದ ಜಾತಿ ನೆಪ ಹೇಳಿ ಈಗ ತಲೆಮರೆಸಿಕೊಂಡಿದ್ದಾನೆ.ಉಡುಪಿ ಮಹಿಳಾ ಠಾಣೆಯಲ್ಲಿ ದೂರು ದಾಖಲಿಸಿದರೂ ಯಾವುದೇ ಪ್ರಯೋಜನವೂ ಆಗಿಲ್ಲ.
ರಾಜಕೀಯವಾಗಿ,ಆರ್ಥಿಕವಾಗಿ ಪ್ರಭಾವಿಯಾಗಿರುವ ಸುಕುಮಾರ್ ಶೆಟ್ಡಿ ಪ್ರಭಾವ ಬಳಸಿ ತನಿಖೆಯಾಗದಂತೆ ನೋಡಿಕೊಳ್ಳುತ್ತಿದ್ದಾನೆ.ಈ ಸಂಬಂಧ ಎಸ್ಪಿಯವರಿಗೂ ಮನವಿ ನೀಡಿದ್ದು ಆತನಿಕೆ ಸೂಕ್ತ ಶಿಕ್ಷ ಆಗಬೇಕು ಎಂದು ಆಗ್ರಹಿಸಿದ್ದಾರೆ.
Kshetra Samachara
21/12/2020 12:03 pm