ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಪರಿಚಯಸ್ಥರೇ ಅಪಹರಣ ನಡೆಸಿದ್ದಾರೆ: ದ.ಕ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮೀ ಪ್ರಸಾದ್

ಮಂಗಳೂರು: ಉಜಿರೆಯ ಉದ್ಯಮಿಯೊಬ್ಬರ ಮಗನ ಅಪಹರಣ ಪ್ರಕರಣದಲ್ಲಿ ಬಾಲಕನನ್ನು ಪತ್ತೆ ಹಚ್ಚಿ ಹೆತ್ತವರಿಗೆ ಹಸ್ತಾಂತರಿಸಿದ್ದು, ಪರಿಚಯಸ್ಥರೇ ಅಪಹರಣ ನಡೆಸಿದ್ದಾರೆ.

ಪ್ರಮುಖ ಸೂತ್ರ ದಾರನ ಪತ್ತೆಯಾಗಿದ್ದು ಆತನ ಬಂಧನಕ್ಕೆ ಬಲೆ‌ಬೀಸಲಾಗಿದೆ ಎಂದು ದ.ಕ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮೀ ಪ್ರಸಾದ್ ತಿಳಿಸಿದ್ದಾರೆ.

ತಮ್ಮ ಕಚೇರಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಡಿ. 17ರಂದು ಸಂಜೆ 6 ಅವಧಿಯ ನಡುವೆ ಉಜಿರೆಯ ರಥಬೀದಿ ಅಶ್ವತಕಟ್ಟೆಯ ಬಳಿಯಿಂದ ಬಾಲಕ ಅನುಭವ್‌ನನ್ನು ಅಪಹರಿಸಲಾಗಿದ್ದು, ಇಂದು ಬೆಳಗ್ಗಿನ ಜಾವ ಅಪಹರಣಗೊಂಡಿದ್ದ ಬಾಲಕನೊಂದಿಗೆ ಆರು ಮಂದಿ ಆರೋಪಿಗಳನ್ನು ಕೋಲಾರದಲ್ಲಿ ಬಂಧಿಸಲಾಗಿದೆ.

ಬಂಧಿತರಾದ ಮಂಡ್ಯದ ರಂಜಿತ್ (22), ಹನುಮಂತು (21), ಮೈಸೂರಿನ ಗಂಗಾಧರ (25), ಬೆಂಗಳೂರಿನ ಕಮಲ್ (22) ಅಪಹರರಣ‌ ನಡೆಸಿದ್ದು, ಕೋಲಾರದ ಮಂಜುನಾಥ್ (24) ಹಾಗೂ ಮಹೇಶ್ (26) ಅಪಹರಣಕಾರರಿಗೆ ಆಶ್ರಯ ನೀಡಿರುವ ಹಿನ್ನೆಲಯಲ್ಲಿ ಅವರನ್ನೂ ವಶಕ್ಕೆ ಪಡೆಯಲಾಗಿದೆ ಎಂದು ಎಸ್ಪಿ ತಿಳಿಸಿದರು.

Edited By : Manjunath H D
Kshetra Samachara

Kshetra Samachara

19/12/2020 09:11 pm

Cinque Terre

34.22 K

Cinque Terre

0

ಸಂಬಂಧಿತ ಸುದ್ದಿ