ಬ್ರಹ್ಮಾವರ: ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಶಿರಿಯಾರ ಗ್ರಾಮದಲ್ಲಿ ಇಂದು 600 ಕ್ವಿಂಟಾಲ್ ರೇಷನ್ ಅಕ್ಕಿಯನ್ನು ಸೀಝ್ ಮಾಡಲಾಗಿದೆ.ಅಕ್ರಮವಾಗಿ ಪಡಿತರ ಅಕ್ಕಿಯನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದಾಗ ಈ ದಾಳಿ ನಡೆದಿದೆ.ಆರೋಪಿಗಳ ಸಹಿತ ಅವರು ಬಳಸುತ್ತಿದ್ದ ವಾಹನಗಳನ್ನೂ ಸೀಝ್ ಮಾಡಲಾಗಿದೆ.
ಈ ಘಟನೆಗೆ ಸಂಬಂಧಿಸಿ ಪ್ರತಿಕ್ರಿಯೆ ನೀಡಿರುವ ಜಿಲ್ಲಾಧಿಕಾರಿ ಜಿ.ಜಗಧೀಶ್ ಯಾವುದೇ ಕಾರಣಕ್ಕೂ ಬಡವರ ಅಕ್ಕಿಯನ್ನು ಮಾರಾಟ ಮಾಡುವವರನ್ನು ಬಿಡುವುದಿಲ್ಲ.ಅಂಥವರನ್ನು ಮಟ್ಟ ಹಾಕುತ್ತೇವೆ.ಇವತ್ತು ಆರುನೂರಕ್ಕೂ ಹೆಚ್ಚು ಕ್ವಿಂಟಾಲ್ ಅಕ್ಕಿಯನ್ನು ಸೀಝ್ ಮಾಡಿದ್ದೇವೆ.ಕಳೆದ ತಿಂಗಳು ಕುಂದಾಪುರದಲ್ಲೂ ಇಂತಹ ಪ್ರಕರಣ ನಡೆದಿತ್ತು.ಬಡವರು ತಮ್ಮ ಅಕ್ಕಿಯನ್ನು ಮಾರಾಟ ಮಾಡಬೇಡಿ.ಯಾರಾದರೂ ಮಾರಾಟ ಮಾಡುವವರು ಕಂಡು ಬಂದರೆ ಮಾಹಿತಿ ನೀಡಿ,ಅಂಥವರ ವಿರುದ್ಧ ಕಠಿಣ ಕ್ರಮ ಜರುಗಿಸುತ್ತೇವೆ ಎಂದು ಹೇಳಿದ್ದಾರೆ.
Kshetra Samachara
02/11/2020 07:25 pm