ಬೆಳ್ತಂಗಡಿ: ಕಮ್ಯುನಿಸ್ಟ್ ಪಕ್ಷದ ಋಣಮುಕ್ತ ಹೋರಾಟ ಸಮಿತಿ ರಾಜ್ಯಾಧ್ಯಕ್ಷ ತಲವಾರು ಹಿಡಿದು ಬೆದರಿಕೆ ಹಾಕುವ ವೀಡಿಯೊ ವೈರಲ್ ಆಗಿದೆ. ಬೆಳ್ತಂಗಡಿ ತಾಲೂಕಿನ ತೆಂಕಕಾರಂದೂರು ಗ್ರಾಮದ ಆಲಡ್ಕ ಎಂಬಲ್ಲಿ ಎರಡು ಮನೆಯವರ ಜಮೀನು ವಿವಾದ ಇತ್ತು.
ಅಲ್ಲಿಗೆ ತಲವಾರು ಹಿಡಿದುಕೊಂಡು ತೆರಳಿದ ಬೆಳ್ತಂಗಡಿ ಲಾಯಿಲ ನಿವಾಸಿ ಮಂಜುನಾಥ್ ಇನ್ನೊಂದು ಜಾಗದ ಚೆಂಬ ಎಂಬವರಿಗೆ ತಲವಾರು ತೋರಿಸಿ ಬೇಲಿ ಹಾಕಿಸಿದ್ದಲ್ಲದೇ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ. ಘಟನಾ ಸ್ಥಳದಲ್ಲಿ ಎರಡು ತಂಡದ ನಡುವೆ ಗಲಾಟೆ ಕೂಡ ನಡೆದಿದೆ. ಈ ವೇಳೆ ಮಂಜುನಾಥ್ ಲಾಯಿಲ ಸ್ಥಳದಿಂದ ಕಾಲ್ಕಿತ್ತಿದ್ದಾನೆ.
Kshetra Samachara
09/10/2020 12:03 pm