ಮಂಗಳೂರು: ನಗರದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿರುವ ಚಿನ್ನ ಅಕ್ರಮ ಸಾಗಾಟದ ಎರಡು ಪ್ರತ್ಯೇಕ ಪ್ರಕರಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು 55,39,810 ರೂ. ಮೌಲ್ಯದ 1087.250 ಗ್ರಾಂ ಚಿನ್ನವನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
ದುಬೈನಿಂದ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿದ ಮೂವರು ಪ್ರಯಾಣಿಕರು ಚಿನ್ನವನ್ನು ಪೇಸ್ಟ್ ರೂಪದಲ್ಲಿ ಪರಿವರ್ತಿಸಿ ನಾಲ್ಕು ಕಪ್ಪು ಬಣ್ಣದ ಕವರ್ ನೊಳಗಡೆ ಇಟ್ಟು ಎರಡು ಜೊತೆ ಚಪ್ಪಲಿಯೊಳಗಡೆ ಬಚ್ಚಿಟ್ಟು ಸಾಗಾಟ ಮಾಡುತ್ತಿದ್ದರು. ಕಸ್ಟಮ್ಸ್ ಅಧಿಕಾರಿಗಳು ತಪಾಸಣೆ ಮಾಡಿದಾಗ ಪ್ರಕರಣ ಬಯಲಿಗೆ ಬಂದಿದೆ. ಪ್ರಯಾಣಿಕರನ್ನು ಬಂಧಿಸಿ ಚಿನ್ನವನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಇವರಿಂದ 897 ಗ್ರಾಂ ತೂಕದ 45,65,730 ಲಕ್ಷ ರೂ. ಮೌಲ್ಯದ ಶುದ್ಧ ಚಿನ್ನವನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ.
ಮತ್ತೊಂದು ಪ್ರಕರಣದಲ್ಲಿ ಕಾಸರಗೋಡು ಮೂಲದ ಪ್ರಯಾಣಿಕನೋರ್ವನು ಮಂಗಳೂರು ಏರ್ಪೋಟ್ ನಲ್ಲಿ ಬಂದಿಳಿದಿದ್ದಾನೆ. ಕಸ್ಟಮ್ಸ್ ಅಧಿಕಾರಿಗಳು ತಪಾಸಣೆ ನಡೆಸಿದಾ ಈತ ಅಕ್ರಮವಾಗಿ ಚಿನ್ನ ಸಾಗಾಟ ಮಾಡುತ್ತಿರುವುದು ತಿಳಿದು ಬಂದಿದೆ. ಈತ ಅಂಟು ರೂಪದ ಚಿನ್ನವನ್ನು ಕಾಗದಕ್ಕೆ ಅಂಟಿಸಿ ಕಾರ್ಬನ್ ಶೀಟ್ ನೊಳಗಡೆ ಬಚ್ಚಿಟ್ಟು ಬಾಕ್ಸ್ ನೊಳಗಡೆ ಇಟ್ಟು ಸಾಗಾಟ ಮಾಡುತ್ತಿದ್ದ. ತಕ್ಷಣ ಪ್ರಯಾಣಿಕನನ್ನು ಬಂಧಿಸಿದ ಕಸ್ಟಮ್ಸ್ ಅಧಿಕಾರಿಗಳು ಈತನಿಂದ 190.250 ಗ್ರಾಂ ತೂಕದ 9,74,080 ಲಕ್ಷ ರೂ. ಮೌಲ್ಯದ ಶುದ್ಧ ಚಿನ್ನವನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
Kshetra Samachara
07/09/2022 01:09 pm