ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು ಶೂಟೌಟ್ ಪ್ರಕರಣ: ಬಾಲಕನ ಮಿದುಳು ನಿಷ್ಕ್ರಿಯ, ತಂದೆಗೆ ಹೃದಯಾಘಾತ

ಮಂಗಳೂರು: ನಗರದ ಮೋರ್ಗನ್ಸ್‌ಗೇಟ್‌ ಪ್ರದೇಶದಲ್ಲಿ ತಂದೆ ಹಾರಿಸಿರುವ ಗುಂಡು ತಲೆಗೆ ತಗುಲಿ ಗಂಭೀರ ಸ್ಥಿತಿಯಲ್ಲಿದ್ದ ಪುತ್ರನ ಮೆದುಳು ನಿಷ್ಕ್ರಿಯಗೊಂಡಿದೆ‌. ಮೆದುಳು ನಿಷ್ಕ್ರಿಯಗೊಂಡ‌ ಹಿನ್ನೆಲೆಯಲ್ಲಿ ಆತನ‌ ಅಂಗಾಂಗಗಳ ದಾನ ಮಾಡುವ ಕುರಿತ ಪ್ರಕ್ರಿಯೆ ನಡೆಯುತ್ತಿದೆ ಎಂದು ಆಸ್ಪತ್ರೆಯ ಮೂಲಗಳಿಂದ ತಿಳಿದು ಬಂದಿದೆ.

ಉದ್ಯಮಿ ರಾಜೇಶ್ ಪ್ರಭು ಎಂಬವರು ತಮ್ಮ ಕೆಲಸದಾಳುವಿಗೆ ಹಾರಿಸಿದ ಗುಂಡು ತಪ್ಪಿ ಅವರ ಪುತ್ರ ಸುಧೀಂದ್ರ ಪ್ರಭು(16)ವಿಗೆ ತಗುಲಿ ಗಂಭೀರ ಸ್ಥಿತಿಯಲ್ಲಿದ್ದನು. ಇದೀಗ ಆತನ ಮಿದುಳು ನಿಷ್ಕ್ರಿಯಗೊಂಡಿದೆ. ಪುತ್ರ ಸುಧೀಂದ್ರ ಪ್ರಭು ಮಿದುಳು ನಿಷ್ಕ್ರಿಯಗೊಂಡ ಸುದ್ದಿ ತಿಳಿಯುತ್ತಿದ್ದಂತೆ ರಾಜೇಶ್ ಪ್ರಭು ಅವರಿಗೆ ಹೃದಯಾಘಾತವಾಗಿದೆ. ಇದೀಗ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.

ಹಣಕಾಸು ವಿಚಾರದಲ್ಲಿ ಉದ್ಯಮಿ ರಾಜೇಶ್ ಪ್ರಭು ಪತ್ನಿ ಹಾಗೂ ಚಾಲಕ, ಕ್ಲೀನರ್ ನಡುವೆ ಮಂಗಳವಾರ ಸಂಜೆ ವಾಗ್ವಾದ ನಡೆದಿತ್ತು. ಇದೇ ವೇಳೆ ಸ್ಥಳಕ್ಕಾಗಮಿಸಿರುವ ತಂದೆ‌, ಮಗ ಸಿಬ್ಬಂದಿ ಜೊತೆ ಜಗಳಕ್ಕಿಳಿದಿದ್ದರು. ಈ ನಡುವೆ ಮೃತ ಸುಧೀಂದ್ರ ಚಾಲಕ, ಕ್ಲೀನರ್ ಮೇಲೆ ಹಲ್ಲೆಗೈದಿದ್ದು, ರಾಜೇಶ್ ಪ್ರಭು ಪಿಸ್ತೂಲ್‌ನಿಂದ ಸಿಬ್ಬಂದಿಗೆ ಎರಡು ಸುತ್ತು ಗುಂಡು ಹಾರಿಸಿದ್ದಾರೆ. ಆದರೆ ಗುಂಡು ಪುತ್ರ ಸುಧೀಂದ್ರನಿಗೇ ತಗುಲಿದ್ದು, ಗುಂಡು ಆತನ ಎಡಗಣ್ಣಿನ ಬದಿಯಿಂದ ಹಾದುಹೋಗಿದ್ದ ಗುಂಡು ತಲೆಯ ಒಳಭಾಗದಲ್ಲಿ 7-8 ಇಂಚು ಆಳಕ್ಕಿಳಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.  

Edited By : Nirmala Aralikatti
Kshetra Samachara

Kshetra Samachara

06/10/2021 04:24 pm

Cinque Terre

19.92 K

Cinque Terre

12

ಸಂಬಂಧಿತ ಸುದ್ದಿ