ಕುಂದಾಪುರ: ಕುಂದಾಪುರ ಸರಕಾರಿ ಕಾಲೇಜು ಸ್ಕಾರ್ಫ್ ವಿವಾದ ಇಂದು ಮುಂದುವರೆದಿದೆ.ಇಂದು ಬೆಳಿಗ್ಗೆ ಕಾಲೇಜು ಕ್ಯಾಂಪಸ್ ಗೇಟ್ ದಾಟಿ ಒಳಗೆ ಬಂದ ಸ್ಕಾರ್ಫ್ ಧಾರಿ ವಿದ್ಯಾರ್ಥಿನಿಯರನ್ನು ಪ್ರಾಂಶುಪಾಲರು ಮೈದಾನದಲ್ಲೇ ತಡೆದು ನಿಲ್ಲಿಸಿದ ಘಟನೆ ನಡೆದಿದೆ.
ನಮ್ಮನ್ನು ತರಗತಿಗೆ ಬಿಡಿ ಎಂದು ವಿದ್ಯಾರ್ಥಿನಿಯರು ಗೋಗರೆದಿದ್ದಾರೆ. ಉಪನ್ಯಾಸಕರು, ಪ್ರಾಂಶುಪಾಲರು ಕೂಡಾ ಮೈದಾನದಲ್ಲೇ ಮೊಕ್ಕಾಂ ಹೂಡಿದ್ದು ,ಉಪನ್ಯಾಸಕರು ಮಕ್ಕಳ ಮನವೊಲಿಸುವ ಪ್ರಯತ್ನ ಮಾಡಿದರು.
ಈ ವೇಳೆ ,ಕನಿಷ್ಟ ಪಕ್ಷ ಸ್ಟೇಜ್ ಬಳಿ ಕೂರಲು ಅವಕಾಶ ನೀಡುವಂತೆ ವಿದ್ಯಾರ್ಥಿನಿಯರು ಕಣ್ಣೀರು ಹಾಕಿದರು. 20 ಮಂದಿ ಬಾಲಕಿಯರು ಮೈದಾನದಲ್ಲೇ ಕುಳಿತಿದ್ದು ,ಪೋಷಕರನ್ನು ಗೇಟ್ ಹೊರಗೆ ಕಳಿಸಿ ಬೀಗ ಹಾಕಲಾಗಿದೆ.
ಕುಂದಾಪುರ ಠಾಣೆ ಸರ್ಕಲ್ ಇನ್ಸ್ ಪೆಕ್ಟರ್ ಶ್ರೀಕಾಂತ್ ಸ್ಥಳಕ್ಕೆ ಆಗಮಿಸಿದ್ದು, ಪೋಷಕರನ್ನು ತರಾಟೆಗೆ ತೆಗೆದುಕೊಂಡರಲ್ಲದೆ ಪ್ರತಿಭಟನೆ ನಡೆಸಿದರೆ FIR ಮಾಡುವ ಎಚ್ಚರಿಕೆ ನೀಡಿದರು.
PublicNext
04/02/2022 11:19 am