ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾಪು: ಕಲಬೆರಕೆ ಜೇನುತುಪ್ಪ ಮಾರಾಟ; ನಾಲ್ವರನ್ನು ಪೊಲೀಸರಿಗೊಪ್ಪಿಸಿದ ಸ್ಥಳೀಯರು

ಕಾಪು: ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಮಜೂರು ಎಂಬಲ್ಲಿ ಕಲಬೆರಕೆ ಜೇನುತುಪ್ಪ ಮಾರಾಟ ಮಾಡುತ್ತಿದ್ದ ಯುವಕರನ್ನು ಸ್ಥಳೀಯರು ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ನಡೆದಿದೆ.

ಬಿಹಾರ ಮೂಲದ ರೋಹನ್, ಪರಮ್ ಸಿಂಗ್, ವಿಕಾಸ್ ಮತ್ತು ಬಾದ್ ಶಾ ಆರೋಪಿಗಳು. ಈ ತಂಡ ಕಲಬೆರಕೆ ಜೇನುತುಪ್ಪ ಮಾರಾಟ ಮಾಡುವ ಮೂಲಕ ಸ್ಥಳೀಯರಿಗೆ ಟೋಪಿ ಹಾಕಿ ಹಣ ಗಳಿಸಲು ಬಂದಿತ್ತು.

ತಿಂಗಳ ಹಿಂದೆ ಮಜೂರು ಪರಿಸರದಲ್ಲಿ ಈ ತಂಡ ಜೇನುತುಪ್ಪ ಮಾರಾಟ ಮಾಡಿದ್ದು, ಸ್ಥಳೀಯರು‌ ಖರೀದಿಸಿದ್ದರು. ಖರೀದಿಸಿದ ಬಳಿಕ ಅದು ಕಲಬೆರಕೆ ಎಂದು ಗೊತ್ತಾಗಿತ್ತು. ಇಂದು ಮತ್ತೆ ಬಂದ ತಂಡವನ್ನು ಸ್ಥಳೀಯರು ನಿಲ್ಲಿಸಿ, ಪ್ರಶ್ನಿಸಿದ್ದು ಈ ಸಂದರ್ಭ ಯುವಕರು ತಪ್ಪೊಪ್ಪಿಕೊಂಡಿದ್ದಾರೆ.

ಆರೋಪಿಗಳು ಜೇನುತುಪ್ಪಕ್ಕೆ ಸಕ್ಕರೆ, ಬೆಲ್ಲ ಮತ್ತಿತರ ಸಾಮಗ್ರಿ ಮಿಶ್ರಣ ಮಾಡಿ ಮಾರಾಟ ಮಾಡುತ್ತಿದ್ದರು. ಸ್ಥಳೀಯರು ಈ ವಂಚಕರನ್ನು ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ.

Edited By : Manjunath H D
Kshetra Samachara

Kshetra Samachara

16/11/2020 09:47 pm

Cinque Terre

27 K

Cinque Terre

3