ಕಾರ್ಕಳ: ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಜಾರ್ಕಳದ ಕಲ್ಲಿನ ಕ್ವಾರಿಯೊಂದರಲ್ಲಿ ಸ್ಫೋಟ ಸಂಭವಿಸಿದ ಪರಿಣಾಮ ಇಬ್ಬರು ಕಾರ್ಮಿಕರು ಗಂಭೀರ ಗಾಯಗೊಂಡಿದ್ದಾರೆ.
ತಮಿಳುನಾಡು ಮೂಲದ ಮಂಜುನಾಥ (44), ರಾಘವೇಂದ್ರ(40) ಗಾಯಗೊಂಡ ಕಾರ್ಮಿಕರಾಗಿದ್ದು, ಆಸ್ಪತ್ರೆಗೆ ದಾಖಿಸಲಾಗಿದೆ. ಇಬ್ಬರೂ ವಿಶೇಷಚೇತನರು ಎನ್ನಲಾಗಿದೆ.
ಕ್ವಾರಿ ಕಾಮಗಾರಿಯಲ್ಲಿ ಕಲ್ಲು ಒಡೆಯಲು ಸ್ಫೋಟಕ ಬಳಸಲಾಗುತ್ತಿದ್ದು, ರಾಸಾಯನಿಕ ವಸ್ತು ಬಳಕೆ ಸಂದರ್ಭ ಮುನ್ನೆಚ್ಚರಿಕೆ ವಹಿಸದೇ ಇರುವುದರಿಂದ ಈ ದುರ್ಘಟನೆ ಸಂಭವಿಸಿದೆ. ಕಾರ್ಕಳ ನಗರ ಠಾಣೆ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.
Kshetra Samachara
01/12/2021 11:35 am