ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿಯಲ್ಲಿ ಡ್ರಗ್ಸ್ ಆರೋಪಿಗಳ ಪರೇಡ್ : ಸಮಾಜದ್ರೋಹಿ ಕಾರ್ಯ ಮಾಡದಂತೆ ಖಡಕ್ ವಾರ್ನಿಂಗ್

ಉಡುಪಿ: ಜಿಲೆಯಲ್ಲಿ ಮಾದಕ ವಸ್ತು ಸಾಗಾಟ ಮತ್ತು ಮಾರಾಟ ಪ್ರ ಕರಣಗಳಲ್ಲಿ ಭಾಗಿಯಾದ ಆರೋಪಿಗಳ ಪರೇಡನ್ನು ಇಂದು ಉಡುಪಿ ನಗರದ ಚಂದು ಮೈದಾನದಲ್ಲಿ ನಡೆಸಲಾಯಿತು.

ಪರೇಡ್ ನಲ್ಲಿ ಬೈಂದೂರು ಠಾಣಾ ವ್ಯಾಪ್ತಿಯಿಂದ ಇಬ್ಬರು, ಕುಂದಾಪುರ ಠಾಣಾ ವ್ಯಾಪ್ತಿಯಿಂದ 18 ಜನ,

ಕುಂದಾಪುರ ಗ್ರಾಮಾಂತರ ಠಾಣಾ ವ್ಯಾಪ್ತಿಯಿಂದ 4 ಮಂದಿ, ಕೋಟ ಠಾಣಾ ವ್ಯಾಪ್ತಿಯಿಂದ ಇಬ್ಬರು, ಉಡುಪಿ ನಗರ ಠಾಣಾ

ವ್ಯಾಪ್ತಿಯಿಂದ 12 ಜನ, ಮಲ್ಪೆ ಠಾಣಾ ವ್ಯಾಪ್ತಿಯಿಂದ 5 ಮಂದಿ, ಮಣಿಪಾಲ ಠಾಣಾ ವ್ಯಾಪ್ತಿಯಿಂದ 16 ಜನ ಸೆನ್ ಠಾಣಾ

ವ್ಯಾಪ್ತಿಯಿಂದ ಇಬ್ಬರು, ಕಾರ್ಕಳ ನಗರ ಠಾಣಾ ವ್ಯಾಪ್ತಿಯಿಂದ ಇಬ್ಬರು, ಪಡುಬಿದ್ರಿ ಠಾಣಾ ವ್ಯಾಪ್ತಿಯಿಂದ 5 ಜನ, ಕಾಪು

ಠಾಣಾ ವ್ಯಾಪ್ತಿಯಿಂದ 3 ಜನ ಹಾಗೂ ಹಿರಿಯಡ್ಕ ಠಾಣಾ ವ್ಯಾಪ್ತಿಯಿಂದ ಓರ್ವ . ಹೀಗೆ ಒಟ್ಟು 72 ಮಂದಿ ಆರೋಪಿಗಳು

ಹಾಜರಿದ್ದರು.

ಪರೇಡ್‍ನಲ್ಲಿ ಭಾಗವಹಿಸಿದ್ದ

ಆರೋಪಿಗಳನ್ನು ಉದ್ದೇಶಿಸಿ ಮಾತನಾಡಿದ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್, ಸಮಾಜದ

ಸ್ವಾಸ್ತ್ಯ ಕಾಪಾಡುವ ನಿಟ್ಟಿನಲ್ಲಿ ಇನ್ನು ಮುಂದೆ ಇಂತಹ ಸಮಾಜದ್ರೋಹಿ ಚಟುವಟಿಕೆಗಳಲ್ಲಿ ಭಾಗವಹಿಸದೆ ಉತ್ತಮ

ರೀತಿಯಲ್ಲಿ ಜೀವನ ನಡೆಸಲು ತಿಳಿ ಹೇಳಿದರು. ಇನ್ನು ಮುಂದಕ್ಕೆ ಇಂತಹ ಪ್ರವೃತ್ತಿ

ಮುಂದುವರಿಸಿಕೊಂಡು ಹೋದಲ್ಲಿ ಕಠಿಣ ಕಾನೂನು ಕ್ರಮದ ಎಚ್ಚರಿಕೆಯನ್ನೂ ನೀಡಿದರು.

Edited By : Nagaraj Tulugeri
Kshetra Samachara

Kshetra Samachara

28/10/2020 05:20 pm

Cinque Terre

28.7 K

Cinque Terre

2