ಮಂಗಳೂರು: ಇಂದು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಹುಟ್ಟುಹಬ್ಬ. ಜೊತೆಗೆ ಅವರ ಅಭಿನಯದ ಕೊನೆಯ ಸಿನಿಮಾ ಜೇಮ್ಸ್ ತೆರೆಕಂಡಿದೆ. ಅವರ ಹಠಾತ್ ನಿಧನ ಅಭಿಮಾನಿಗಳಿಗೆ ಶಾಕ್ ನೀಡಿದ್ದರೂ ಇಂದು ಅವರ ಹುಟ್ಟುಹಬ್ಬವನ್ನು ವಿಶಿಷ್ಟ ರೀತಿಯಲ್ಲಿ ಆಚರಿಸುತ್ತಿದ್ದಾರೆ. ಈ ಮೂಲಕ ಒಂದಲ್ಲ ಒಂದು ರೀತಿ ತಮ್ಮ ಅಭಿಮಾನವನ್ನು ತೋರಿಸುತ್ತಿದ್ದಾರೆ.
ಮಂಗಳೂರಿನಲೋರ್ವ ಅಪ್ಪಟ ಪುನೀತ್ ರಾಜ್ ಕುಮಾರ್ ಅಭಿಮಾನಿ 'ಲೈಫ್ ಬಾಯ್' ಬಾತ್ ಸೋಪ್ ನಲ್ಲಿ ಪುನೀತ್ ರಾಜ್ ಕುಮಾರ್ ಭಾವಚಿತ್ರ ಬಿಡಿಸಿ ವಿಶಿಷ್ಟ ರೀತಿಯಲ್ಲಿ ತಮ್ಮ ಅಭಿಮಾನ ವ್ಯಕ್ತಪಡಿಸಿದ್ದಾರೆ.
ಕೇವಲ ಎರಡು ಗಂಟೆಯಲ್ಲಿ ಅಪ್ಪು ಭಾವಚಿತ್ರವನ್ನು ಗುಂಡು ಪಿನ್ ಮೂಲಕ ಚಿತ್ರಿಸಿದ್ದಾರೆ. ಮಂಗಳೂರಿನ ಗಣೇಶಪುರದ ದೇವಿಕಿರಣ್ ಎಂಬ ಕಲಾವಿದರು ಪುನೀತ್ ಅಪ್ಪಟ ಅಭಿಮಾನಿ. ಆದ್ದರಿಂದ 'ಅಪ್ಪು' ನೆನಪಿನ ಹಾಗೂ ಅಭಿಮಾನದ ದ್ಯೋತಕವಾಗಿ ಸೋಪ್ ನಲ್ಲಿ 'ಅಪ್ಪು' ಭಾವಚಿತ್ರ ರಚನೆಯ ವಿಶಿಷ್ಟ ಪ್ರಯತ್ನ ಮಾಡಿದ್ದಾರೆ.
ಬೇರೆ ಸೋಪ್ ಗಳಲ್ಲಿ ಅಪ್ಪು ಭಾವಚಿತ್ರ ರಚನೆಗೆ ಅವರು ಪ್ರಯತ್ನಿಸಿದ್ದರೂ ಅದು ಸಾಧ್ಯವಾಗಿರಲಿಲ್ಲ. ಇದೀಗ ಲೈಫ್ ಬಾಯ್ ಸೋಪ್ ನಿಂದ ಅಪ್ಪು ಭಾವಚಿತ್ರ ರಚಿಸಿ ಯಶಸ್ಸು ಕಂಡಿದ್ದಾರೆ.
ಇದರ ಮೇಕಿಂಗ್ ವೀಡಿಯೋವನ್ನು ದೇವಿಕಿರಣ್ ಫೇಸ್ ಬುಕ್ ನಲ್ಲಿ ಅಪ್ಲೋಡ್ ಮಾಡಿದ್ದು ನೆಟ್ಟಿಗರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ವೀಡಿಯೋ ಸಾಕಷ್ಟು ವೈರಲ್ ಕೂಡಾ ಆಗ್ತಿದೆ.
PublicNext
17/03/2022 11:14 am