ಉಡುಪಿ: ಪುನೀತ್ ರಾಜ್ ಕುಮಾರ್ ಅವರ ಅಕಾಲಿಕ ನಿಧನಕ್ಕೆ ಸಂತಾಪ ಸೂಚಿಸಿ, ಯಕ್ಷಗಾನದ ಮೂಲಕ ಉಡುಪಿಯಲ್ಲಿ ಅಂತಿಮ ನಮನ ಸಲ್ಲಿಸಲಾಯಿತು.
ಕರಾವಳಿಯ ಜನಪ್ರಿಯ ಯಕ್ಷಗಾನ ಕಲೆಯ ಅಭಿಮಾನಿಯಾಗಿರುವ ಪುನೀತ್ ರಾಜಕುಮಾರ್ ಅವರು ಹಲವು ಬಾರಿ ಯಕ್ಷಗಾನದ ಹಿರಿಮೆಗೆ ಮನಸೋತು, ಅದರ ಮಹತ್ತಿಕೆ ಮಾತನಾಡಿದ್ದರು. ಇದೀಗ ಜೀವನ ಪಯಣ ಅಂತ್ಯಗೊಳಿಸಿದ ಅಪ್ಪುವಿಗೆ ಈ ಹಾಡನ್ನು ಅರ್ಪಣೆ ಮಾಡಲಾಗಿದೆ.
ಭಾಗವತ, ಹಿರಿಯ ಕಲಾವಿದ ಪ್ರಸಾದ್ ಕುಮಾರ್ ಮೊಗೆಬೆಟ್ಟು ಸಾಹಿತ್ಯ ಬರೆದಿದ್ದಾರೆ. ತೆಕ್ಕಟ್ಟೆಯ ಯಶಸ್ವಿ ಕಲಾವೃಂದ ಪದ್ಯವನ್ನು ಪ್ರಸ್ತುತಪಡಿಸಿದೆ.
Kshetra Samachara
31/10/2021 12:24 pm