ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಕೊಲ್ಲೂರು ಮೂಕಾಂಬಿಕೆ ದರ್ಶನ ಪಡೆದ 'ಲಕ್ಷ್ಮೀ' ; " ತವರು ಮನೆಗೆ ಬಂದಂಗಾಯಿತು!"

ಕೊಲ್ಲೂರು: ಮಗಳ ಅಡ್ಮಿಷನ್ ಸಲುವಾಗಿ ಮಣಿಪಾಲಕ್ಕೆ ಭೇಟಿ ನೀಡಿರುವ ಖ್ಯಾತ ನಟಿ ಲಕ್ಷ್ಮೀ ಅವರು ದೇವಾಲಯಗಳ ನಗರಿ ಉಡುಪಿ ಜಿಲ್ಲೆಯ ವಿವಿಧ ದೇವಸ್ಥಾನಗಳಿಗೆ ಭೇಟಿ ನೀಡುತ್ತಿದ್ದಾರೆ.

ನಿನ್ನೆ ಶ್ರೀ ಕೃಷ್ಣಮಠಕ್ಕೆ ಕುಟುಂಬ ಸಹಿತ ಬಂದಿದ್ದ ಅವರು, ಇಂದು ಬೈಂದೂರಿನ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ಭೇಟಿ ನೀಡಿ, ತಾಯಿ ಮೂಕಾಂಬಿಕೆಯ ದರ್ಶನ ಪಡೆದು, ಪೂಜೆ ಸಲ್ಲಿಸಿದರು. ದೇವಸ್ಥಾನದ ವತಿಯಿಂದ ಲಕ್ಷ್ಮೀ ಅವರನ್ನು ಗೌರವಿಸಲಾಯಿತು.

ಈ ವೇಳೆ ಮಾತನಾಡಿದ ಲಕ್ಷ್ಮಿ, "ದೇವಾಲಯಕ್ಕೆ ಬಂದಾಗ ನನ್ನ ತವರು ಮನೆಗೆ ಬಂದ ಹಾಗೆ ಆಗುತ್ತದೆ, ನನ್ನ ತಾಯಿಯನ್ನು ನೋಡಿದೆ. ಈ ದೇವಸ್ಥಾನದ ಶುಚಿತ್ವ ಕಂಡು ನನಗೆ ನಿಜಕ್ಕೂ ಆಶ್ಚರ್ಯವಾಗುತ್ತದೆ. ಬೇರೆ ಬೇರೆ ಕಡೆಗಳಿಂದ ಬರುವ ಭಕ್ತರಿಗೆ ಸ್ವಲ್ಪವೂ ಸಮಸ್ಯೆಯಾಗದಂತೆ ವ್ಯವಸ್ಥೆ ಮಾಡಿರುವುದು ತುಂಬಾ ಖುಷಿ ಕೊಟ್ಟಿತು" ಎಂದರು.

Edited By : Manjunath H D
Kshetra Samachara

Kshetra Samachara

20/10/2021 02:26 pm

Cinque Terre

9.6 K

Cinque Terre

0

ಸಂಬಂಧಿತ ಸುದ್ದಿ