ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: 'ಮಾಯೊದ ಮಟ್ಟೆಲ್’ ಲೋಕಾರ್ಪಣೆ

ಮಂಗಳೂರು: ಸ್ಕ್ರೀನ್ ಆಫ್ ಟ್ಯಾಲೆಂಟ್ ಪ್ರಸ್ತುತ ಪಡಿಸುವ ಅಭಿಷೇಕ್ ಬಜಗೋಳಿ ಗೀತೆ ರಚನೆ ಹಾಗೂ ಕಾರ್ತಿಕ್ ಕೊಕ್ರಾಡಿ ಅವರ ಧ್ವನಿ ಮಾಧುರ್ಯದಲ್ಲಿ ಮೂಡಿ ಬಂದಿರುವ ತುಳುನಾಡು ಮಣ್ಣಿನ ಅತೀ ದೊಡ್ಡ ಕಾರ್ನಿಕದ ಸತ್ಯ ದೈವವೆಂದೇ ಕೊಂಡಾಡುವ ಮಂತ್ರದೇವತೆಯನ್ನು ಸ್ತುತಿಸುವ ‘ಮಾಯೊದ ಮಟ್ಟೆಲ್’ ಎಂಬ ತುಳು ಭಕ್ತಿಗೀತೆಯನ್ನು ಯೂಟ್ಯೂಬ್ ಮೂಲಕ ಇಂದು ಸಂಜೆ 6 ಗಂಟೆಗೆ ಲೋಕಾರ್ಪಣೆ ಮಾಡಲಾಯಿತು.

ಬಳಿಕ ಮಾತನಾಡಿದ ಗಾಯಕ ಕಾರ್ತಿಕ್ ಕೊಕ್ರಾಡಿ, ತುಳುನಾಡಿನ ಮಣ್ಣಿನ ಋಣ ಪ್ರತಿ ತುಳುವರ ಮೇಲೆ ಇದ್ದೇ ಇದೇ. ನನ್ನದು ಕೇವಲ ತುಳುನಾಡಿನ ಪರಿಮಳವನ್ನು ದೈವಾರಾಧನೆ ಮೂಲಕ, ದೈವವನ್ನು ಕೊಂಡಾಡುವ ಮೂಲಕ ಪಸರಿಸುವುದಾಗಿದೆ.

ಸತತ 8 ತಿಂಗಳ ಸಾಧನೆಯಲ್ಲಿ ಈಗಾಗಲೇ ಸುಮಾರು ಮೂರು ಭಕ್ತಿಗೀತೆ ಹಾಗೂ ಆರು ಆಲ್ಬಂ ಸಾಂಗ್‌ಗಳಲ್ಲಿ ಹಾಡುವ ಅವಕಾಶ ಸಿಕ್ಕಿದೆ. ತನ್ನ ಪ್ರಥಮ ಗಾನ ಸುರುಳಿ ‘ದೈವ ಸ್ವರೂಪಿ ಸ್ವಾಮಿ ಕೊರಗಜ್ಜ’ ಹಾಗೂ ‘ಮೊಬೈಲ್- ಸಿಂಗ್ ಬೈ ಸ್ಮೂಲ್’ ಆ್ಯಪ್‌ನಲ್ಲಿ ಹಾಡುಗಾರಿಕೆಗೆ ಹೆಚ್ಚು ಸ್ಪಷ್ಟತೆ ನೀಡಿರುವುದಾಗಿ ತಿಳಿಸಿದರು.

Edited By : Nagesh Gaonkar
Kshetra Samachara

Kshetra Samachara

06/08/2021 10:41 pm

Cinque Terre

28.74 K

Cinque Terre

1

ಸಂಬಂಧಿತ ಸುದ್ದಿ