ಉಡುಪಿ: ಎರಡು ವರ್ಷಗಳಿಗೊಮ್ಮೆ ನಡೆಯುವ ನಾಡಹಬ್ಬ ಪರ್ಯಾಯ ಮಹೋತ್ಸವವನ್ನು ಸರಳವಾಗಿ ನಡೆಸಲು ಕೃಷ್ಣಾಪುರ ಮಠಾಧೀಶರು ತೀರ್ಮಾನಿಸಿದ್ದಾರೆ. ಕಳೆದ ಎರಡು ವರ್ಷಗಳಿಂದ ಜಗತ್ತು ಕಂಡು ಕೇಳರಿಯದ ಭೀಕರ ವ್ಯಾಧಿಯ ಕಾರಣದಿಂದ ಗಂಭೀರ ವಿಪತ್ತನ್ನು ಎದುರಿಸುತ್ತಿದೆ.ಸಾವಿರಾರು ಜನ ಈ ವ್ಯಾಧಿಗೆ ತುತ್ತಾಗಿ ಪ್ರಾಣ ಕಳಕೊಂಡಿದ್ದಾರೆ
ಈ ಹೊತ್ತಲ್ಲಿ ಸರ್ಕಾರ ವ್ಯಾಧಿಮುಕ್ತಿಗಾಗಿ ಪ್ರಯತ್ನಿಸುತ್ತಲೇ ಇದೆ.ಆದ್ದರಿಂದ ಪರ್ಯಾಯೋತ್ಸವದ ಹೊತ್ತಲ್ಲೇ ಸರ್ಕಾರವು ನಾಡಿನ ಹಿತಕ್ಕಾಗಿ ಕೈಗೊಳ್ಳುವ ಉಪಕ್ರಮಗಳಿಗೆ ನಾವೆಲ್ಲಸಹಕರಿಸಲೇಬೇಕಾಗಿದೆ.
ಆದ್ದರಿಂದ ತೀರಾ ಸಾಂಪ್ರದಾಯಿಕ ವಿಧಿಗಳಿಗೆ ಒತ್ತು ಕೊಟ್ಟು ಸರಳವಾಗಿ ಈ ಪರ್ಯಾಯೋತ್ಸವವನ್ನು ನಡೆಸುವ ಬಗ್ಗೆ ಸಮಿತಿ ಮಾಡಿರುವ ತೀರ್ಮಾನಕ್ಕೆ ಉಡುಪಿಯ ನಾಗರಿಕರು ಸಮಸ್ತ ಶ್ರೀ ಕೃಷ್ಣ ಭಕ್ತರು ಎಲ್ಲ ರೀತಿಯ ಸಹಕಾರ ನೀಡಿ ಸಹಕರಿಸುವಂತೆ ಅಪೇಕ್ಷಿಸುತ್ತೇವೆ. ಸರ್ಕಾರ ನೀಡುವ ಸೂಚನೆ ಹಾಗೂ ಮಾರ್ಗದರ್ಶನವನ್ನು ಎಲ್ಲರೂ ಚಾಚೂ ತಪ್ಪದೇ ಪಾಲಿಸುವಂತೆ ವಿನಂತಿಸುತ್ತೇವೆ ಎಂದು ಭಾವೀ ಪರ್ಯಾಯ ಶ್ರೀಗಳಾದ ಶ್ರೀ ವಿದ್ಯಾಸಾಗರತೀರ್ಥ ಶ್ರೀಪಾದರು ಹೇಳಿದ್ದಾರೆ.
Kshetra Samachara
10/01/2022 11:22 am