ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿ ಉಡುಪಿ, ದ.ಕ.ಜಿಲ್ಲೆಯ 200 ಚಿನ್ನದಂಗಡಿಗಳಿಗೆ ಬೀಗ, ಚಿನ್ನದ ಕೆಲಸ ತೊರೆದ 2000ಕ್ಕೂ ಮಂದಿ

ಮಂಗಳೂರು: ಕಳೆದ ನಾಲ್ಕೈದು ವರ್ಷಗಳಿಂದ ನೋಟ್ ಬ್ಯಾನ್, ಜಿಎಸ್ ಟಿ, ಕೋವಿಡ್ ಹೊಡೆತಕ್ಕೆ ಸಿಲುಕಿ ಚಿನ್ನದ ಕೆಲಸಗಾರರು ಆರ್ಥಿಕ ಬಿಕ್ಕಟನ್ನು ಅನುಭವಿಸಿದ್ದಾರೆ. ಇದರಿಂದ ಉಡುಪಿ, ದ.ಕ.ಜಿಲ್ಲೆಯ ಸರಿ ಸುಮಾರು 200 ಚಿನ್ನದಂಗಡಿ ಮುಚ್ಚಿದ್ದಲ್ಲದೆ, 2000 ಕ್ಕೂ ಅಧಿಕ ಮಂದಿ ಚಿನ್ನದ ಕೆಲಸವನ್ನು ತೊರೆದು ಬೇರೆ ಉದ್ಯೋಗದೆಡೆ ಮುಖ ಮಾಡಿದ್ದಾರೆ ಎಂದು ಅಖಿಲ ಭಾರತ ವಿಶ್ವಕರ್ಮ ಪರಿಷತ್ ನ ರಾಜ್ಯ ಸಂಚಾಲಕ ಉದಯ ಜಿ ಆಚಾರ್ಯ ಹೇಳಿದರು.

ನಗರದ ಪ್ರೆಸ್ ಕ್ಲಬ್ ನಲ್ಲಿ ಮಾತನಾಡಿದ ಅವರು, ವಿಶ್ವಕರ್ಮ ಸಮಾಜದವರು ಈ ಕೆಲಸವನ್ನು ತೊರೆದರೆ ಮುಂದೊಂದು ದಿನ ಈ ಸಮಾಜದ ಕುಲಕಸುಬು ಮರೆಯಾಗುವ ಸಾಧ್ಯತೆಯಿದೆ. ಆದ್ದರಿಂದ ಈ ಬಗ್ಗೆ ಸರಕಾರ ಈ ಬಗ್ಗೆ ಗಮನ ಹರಿಸಬೇಕಾಗಿದೆ ಎಂದು ಹೇಳಿದರು.

ವಿಶ್ವಕರ್ಮರ ಬಗ್ಗೆ ಹೆಸರು ಹೇಳುವಂತಹ ಯಾವುದೇ ರಸ್ತೆಯಾಗಲಿ, ವೃತ್ತವಾಗಲಿ, ಕಟ್ಟಡವಾಗಲಿ ಇಲ್ಲ. ಬೇರೆ ಸಮಾಜಕ್ಕೆ ಎಲ್ಲವನ್ನೂ ಕೊಡಲಾಗುತ್ತದೆ. ಆದರೆ ವಿಶ್ವಕರ್ಮ ಸಮಾಜಕ್ಕೆ ಯಾಕೆ ಈ ಮಲತಾಯಿ ಧೋರಣೆ ಮಾಡಲಾಗುತ್ತದೆ ಎಂದು ತಿಳಿಯುತ್ತಿಲ್ಲ. ಆದ್ದರಿಂದ ಮುಂದಿನ ದಿನಗಳಲ್ಲಿ ರಾಜ್ಯದ ಪ್ರತೀ ಜಿಲ್ಲೆಗಳಲ್ಲೂ ವಿಶ್ವಕರ್ಮ ರಸ್ತೆ ಅಥವಾ ವೃತ್ತ ಇಲ್ಲದಿದ್ದಲ್ಲಿ ವಿಶ್ವಕರ್ಮ ಸಮಾಜದ ಹಿರಿಯ ವ್ಯಕ್ತಿಗಳ ಹೆಸರನ್ನು ಇಡಬಹುದು. ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ವಿಶ್ವಕರ್ಮ ಏರ್ಪೋರ್ಟ್ ಎಂದು ನಾಮಕರಣವನ್ನು ಮಾಡಬೇಕೆಂದು ಉದಯ ಜಿ ಆಚಾರ್ಯ ಆಗ್ರಹಿಸಿದರು.

Edited By : Manjunath H D
Kshetra Samachara

Kshetra Samachara

21/09/2022 07:08 pm

Cinque Terre

3.61 K

Cinque Terre

1