ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಗೌರಿ ಗಣೇಶ ಹಬ್ಬದ ಸಂಭ್ರಮ; ಹೂವಿನ ವ್ಯಾಪಾರ ಬಲು ಜೋರು

ಮಂಗಳೂರು: ಕೊರೊನಾ ಕಾಟದಿಂದಾಗಿ ಕಳೆದ ಎರಡು ವರ್ಷಗಳಿಂದ ಹಬ್ಬ ಆಚರಿಸಲು ಸಾಧ್ಯವಾಗದ ಹಿನ್ನಲ್ಲೆಯಲ್ಲಿ ಈ ಬಾರಿ ಗೌರಿ-ಗಣೇಶ ಹಬ್ಬ ಕಳೆಗಟ್ಟಿದ್ದು, ಬೆಲೆ ಏರಿಕೆಯ ನಡುವೆಯೂ ಜನ ಗೌರಿ-ಗಣೇಶ ಹಬ್ಬಕ್ಕೆ ಭರ್ಜರಿ ಶಾಪಿಂಗ್ ನಡೆಸುತ್ತಿದ್ದಾರೆ. ಎರಡು ವರ್ಷಗಳ ನಂತರ ಹಬ್ಬ ಆಚರಣೆಗೆ ಅವಕಾಶ ಸಿಕ್ಕಿರುವುದರಿಂದ ಈ ಬಾರಿ ಗೌರಿ-ಗಣೇಶ ಹಬ್ಬ ಆಚರಣೆಗೆ ಜನ ಮುಗಿಬಿದ್ದಿದ್ದಾರೆ.

ಹೀಗಾಗಿ ಮಂಗಳೂರು ನಗರದಲ್ಲಿ ಹೂವಿನ ವ್ಯಾಪಾರ ಭರ್ಜರಿಯಾಗಿ ನಡೆಯುತ್ತಿದೆ. ಹಾಸನ, ಉತ್ತರ ಕರ್ನಾಟಕ ಕಡೆಗಳಿಂದ ಬಂದ ರೈತರು ಮಂಗಳೂರಿನಲ್ಲಿ ಹೂವಿನ ವ್ಯಾಪಾರದಲ್ಲಿ ತೊಡಗಿದ್ದಾರೆ. ಹೂವು, ಹಣ್ಣು ಸೇರಿದಂತೆ ಹಬ್ಬದ ಸಾಮಾಗ್ರಿಗಳ ಖರೀದಿ ಬಲು ಜೋರಾಗಿದೆ. ಜನ ಗೌರಿ ಗಣೇಶ ಹಬ್ಬಕ್ಕೆ ಭರ್ಜರಿ ವ್ಯಾಪಾರ ನಡೆಸುತ್ತಿರುವ ಬೆನ್ನಲ್ಲೆ ಹಣ್ಣು-ಹೂವಿನ ಬೆಲೆ ಗಗನಕ್ಕೇರಿದೆ..

Edited By : Shivu K
Kshetra Samachara

Kshetra Samachara

30/08/2022 03:15 pm

Cinque Terre

2.73 K

Cinque Terre

0