ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಆಧುನಿಕತೆ ಭರಾಟೆಯಲ್ಲಿ ಬಣ್ಣ ಕಳೆದುಕೊಳ್ಳುತ್ತಿದೆ ಉಡುಪಿ ಸೀರೆ - ಕೈ ಮಗ್ಗ ಉದ್ಯಮ.!

ವಿಶೇಷ ವರದಿ: ರಹೀಂ ಉಜಿರೆ

ಉಡುಪಿ: ಶಂಕರಪುರ ಮಲ್ಲಿಗೆ ಮತ್ತು ಮಟ್ಟುಗುಳ್ಳ ,GI ಟ್ಯಾಗ್ ಪಡೆದಿರುವಂತೆಯೇ ಉಡುಪಿ ಸೀರೆಯೂ GI ಟ್ಯಾಗ್ ಮಾನ್ಯತೆ ಪಡೆದಿದೆ.ಅಂದರೆ ಜಿಯಾಗ್ರಫಿಕಲ್ ಐಡೆಂಟಿಫಿಕೇಷನ್. ಇವುಗಳನ್ನು ಬೇರೆಲ್ಲೂ ತಯಾರಿಸಲು ಸಾಧ್ಯವಿಲ್ಲ. ಉಡುಪಿಗೇ ಇವು ಮೀಸಲು ಎಂದು ಇದರ ಅರ್ಥ. ಅದರೆ ಉಡುಪಿ ಸೀರೆ ಆಧುನಿಕತೆ ಭರಾಟೆಯಲ್ಲಿ ತನ್ನ ಬಣ್ಣ ಕಳೆದುಕೊಳ್ಳುತ್ತಿದೆ.

ಈ ಹಿಂದೆ ,ಅಂದರೆ ಎರಡು ದಶಕಗಳ ಹಿಂದೆ ಇಲ್ಲಿ ಎರಡು ಸಾವಿರದಷ್ಟು ಕುಟುಂಬಗಳು ಕೈಮಗ್ಗ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದವು. ಆದರೆ ಅಧುನಿಕತೆ ಭರಾಟೆ ಮತ್ತು ಬೇರೆ ಬೇರೆ ಕಾರಣಗಳಿಂದಾಗಿ ಈ ಉದ್ಯಮ ಸೊರಗತೊಡಗಿತು. ನೀವು ನಂಬಲಿಕ್ಕಿಲ್ಲ, ಇವತ್ತು ಉಡುಪಿಯಲ್ಲಿ ಹೆಚ್ಚೆಂದರೆ 20 ಜನ ಕೈಮಗ್ಗದ ಉಡುಪಿ ಸೀರೆ ನೇಯುವವರು ಉಳಿದುಕೊಂಡಿದ್ದಾರೆ. ಮತ್ತು ಇವರೆಲ್ಲ 65 ವರ್ಷ ಮೇಲ್ಪಟ್ಟವರೇ. ಶೆಟ್ಟಿಗಾರ್ ಅಥವಾ ಪದ್ಮಶಾಲಿ ಸಮುದಾಯದ ಕುಲಕಸುಬು ಇದು. ಅದರತ್ತೆ ಇವತ್ತು ಆ ಸಮುದಾಯದ ಯುವಜನತೆ ಕುಲಕಸುಬನ್ನು ತೊರೆದು ವಿದ್ಯಾವಂತರಾಗಿ ಬೇರೆ ಕೆಲಸಗಳಿಗೆ ಹೋಗುತ್ತಿದ್ದಾರೆ.

1938ರಲ್ಲಿ ಉಡುಪಿ ಪ್ರಾಥಮಿಕ ನೇಕಾರರ ಸೇವಾ ಸಹಕಾರಿ ಸಂಘವನ್ನು ಸ್ಥಾಪಿಸಲಾಗಿತ್ತು. ಈಗ ಉಡುಪಿ ಹಾಗೂ ದಕ್ಷಿಣ ಕನ್ನಡದಲ್ಲಿ ಹಲವು ನೇಕಾರರ ಸಹಕಾರಿ ಸಂಘಗಳಿವೆ. ಅದೇ ರೀತಿ ಕೈಮಗ್ಗವನ್ನು ಉಳಿಸಿ ಬೆಳೆಸಲು ಟ್ರಸ್ಟ್‌ಗಳು ಹುಟ್ಟಿಕೊಂಡಿವೆ. ಈ ಸಂಘಗಳು ಉಡುಪಿ ಸೀರೆಯನ್ನು ಉಳಿಸಿ ಬೆಳೆಸುವ ಪ್ರಯತ್ನಗಳಲ್ಲಿ ತೊಡಗಿಕೊಂಡಿವೆ.ಅವುಗಳಲ್ಲಿ ಪದ್ಮಶಾಲಿ ನೇಕಾರ ಪ್ರತಿಷ್ಠಾನವೂ ಒಂದು.

ಉಡುಪಿ ಸೀರೆಯ ಆಪ್ತತೆಯೇ ಬೇರೆ. ಅದನ್ನು ಉಟ್ಟಾಗ ಆಗುವ ಆನಂದವೇ ಬೇರೆ. ಅದೇ ರೀತಿ ಕೈಮಗ್ಗದ ಉಡುಗೆ ತೊಡುಗೆಗಳು ಈ ನೆಲದ ಅಸ್ಮಿತೆಗಳು. ದುರದೃಷ್ಟವಶಾತ್ ಆಧುನಿಕತೆ ಭರಾಟೆಯಲ್ಲಿ ಕೈ ಮಗ್ಗದ ಉಡುಪಿ ಸೀರೆ ಉದ್ಯಮ ಮಂಕಾಗಿದ್ದು ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳಲು ಹೆಣಗುತ್ತಿದೆ.

Edited By : Manjunath H D
PublicNext

PublicNext

17/08/2022 07:54 am

Cinque Terre

49.36 K

Cinque Terre

1