ಮಂಗಳೂರು: ನಗರದ ವುಡ್ ಲ್ಯಾಂಡ್ ಹೋಟೆಲ್ ನಲ್ಲಿ ಸೆಣಬಿನಿಂದ ತಯಾರಾಗಿರುವ ಆಕರ್ಷಕ ಕಲಾಕೃತಿ ವಸ್ತುಗಳು ಕಣ್ಮನ ಸೆಳೆಯುತ್ತಿದ್ದು, ಐದು ದಿನಗಳ ವರೆಗೆ ಈ ಜ್ಯೂಟ್ ಫೇರ್ ವಸ್ತು ಪ್ರದರ್ಶನ, ಮಾರಾಟ ನಡೆಯುತ್ತಿದೆ.
ಈ ಮೇಳಕ್ಕೆ ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ ಚಾಲನೆ ನೀಡಿ ಮಾತನಾಡಿ,
ಸ್ವಲ್ಪ ದುಬಾರಿಯಾದರೂ ಪ್ಲಾಸ್ಟಿಕ್ ಗೆ ಪರ್ಯಾಯವಾಗಿ ಇರುವುದರಿಂದ ಪರಿಸರಕ್ಕೆ ಉತ್ತಮವಾದದ್ದು. ಚೈನಾ ಮೇಡ್ ಟಾಯ್ಸ್ ಗಳ ಬದಲಿಗೆ ಜ್ಯೂಟ್ ನಲ್ಲಿ ತಯಾರಿಸಿದ ಟಾಯ್ಸ್ ಗಳ ಬಳಕೆ ಮಾಡಬಹುದು ಎಂದರು.
ಇಲ್ಲಿ ಹಲವು ಮಳಿಗೆಗಳಿದ್ದು, ಸೆಣಬಿನ ತಯಾರಿಕೆ ವಸ್ತುಗಳನ್ನು ಮಾತ್ರ ಮಾರಾಟ ಮಾಡಲಾಗುತ್ತಿದೆ. ಬ್ಯಾಗ್, ಪರ್ಸ್, ಜೋಕಾಲಿ ಖುರ್ಚಿ, ಡೈನಿಂಗ್ ಟೇಬಲ್ ಟ್ರೇ, ಗೊಂಬೆಗಳು ಹಾಗೂ ಮಹಿಳೆಯರು, ಮಕ್ಕಳು ಬಳಸುವ ಆಭರಣಗಳು, ಹ್ಯಾಂಡಿಕ್ರಾಫ್ಟ್ ಪಾದರಕ್ಷೆಗಳು ಹೀಗೆ ಅನೇಕ ಬಗೆಯ ವಸ್ತುಗಳಿವೆ.
Kshetra Samachara
05/01/2022 05:42 pm