ವರದಿ: ರಹೀಂ ಉಜಿರೆ
ಉಡುಪಿ: ಕೃಷ್ಣಮಠದ ಆಶ್ರಯದಲ್ಲಿ ರಾಷ್ಟ್ರೀಯ ಕಲೆ ಹಾಗೂ ಕರಕುಶಲ ವಸ್ತುಗಳ ಪ್ರಾತ್ಯಕ್ಷಿಕೆ, ಪ್ರದರ್ಶನ ಮತ್ತು ಮಾರಾಟ ಮೇಳ ನಡೆಯುತ್ತಿದೆ.ರಾಜಾಂಗಣದಲ್ಲಿ ನಡೆಯುತ್ತಿರುವ ಮೇಳಕ್ಕೆ ಉಡುಪಿ ಜನತೆ ಫಿದಾ ಆಗಿದ್ದಾರೆ.ಸ್ಥಳೀಯ ,ರಾಜ್ಯ, ಹೊರ ರಾಜ್ಯಗಳ ಕರಕುಶಲ ವಸ್ತುಗಳ ಮಾರಾಟ ಭರ್ಜರಿಯಾಗಿ ನಡೆದಿದೆ.
ಈ ಕರಕುಶಲ ಪ್ರದರ್ಶನ ಮತ್ತು ಮಾರಾಟ ಮೇಳವನ್ನೊಮ್ಮೆ ನೋಡಿ..ಇಲ್ಲ ಏನುಂಟು ,ಏನಿಲ್ಲ! ಮರದ ಕೆತ್ತನೆ, ಶಿಲಾ ಶಿಲ್ಪ, ಕಂಚಿನ ವಿಗ್ರಹಗಳು, ಮರದ ಕುಂದಣ ಕಲೆ, ಟೆರ್ರಾಕೋಟಾ, ರತ್ನ ಕಂಬಳಿ, ಹತ್ತಿ ಜಮಕಾನೆ, ಆಭರಣಗಳು, ಮರದ ಅರಗಿನ ಕಲಾವಸ್ತುಗಳು, ಕಲಾಂಕರಿ ಚಿತ್ರಕಲೆ, ಚರ್ಮದ ವಸ್ತುಗಳು, ತಂಜಾವೂರು ಮತ್ತು ಮೈಸೂರು ಶೈಲಿಯ ಚಿತ್ರಕಲೆ ಸೇರಿದಂತೆ ಛತ್ತೀಸ್‌ಗಡ, ರಾಜಸ್ಥಾನ, ಉತ್ತರ ಪ್ರದೇಶ, ಬಿಹಾರ ಮತ್ತಿತರ ಕಡೆಗಳ ಆಕರ್ಷಕ ಕರಕುಶಲ ವಸ್ತುಗಳು....ಓಹ್ ಇವನ್ನು ನೋಡಲು ಬಂದವರು ಕೊಂಡುಕೊಳ್ಳದೇ ಇರಲು ಸಾಧ್ಯವೇ ಇಲ್ಲ!
ಬಡಗಿತನ, ಕಮ್ಮಾರಿಕೆ, ಕುಂಬಾರಿಕೆ, ಚಮ್ಮಾರಿಕೆ, ನೇಕಾರಿಕೆ, ಕೈಮಗ್ಗ, ಪಾರಂಪರಿಕ ವೈದ್ಯ ಪದ್ಧತಿಯ ಎಲ್ಲವೂ ಇಲ್ಲಿವೆ.
ಬೆಳ್ಳಿಯ ಸೂಕ್ಷ್ಮ ಕೆತ್ತನೆಯ ಆಭರಣಗಳು, ಸೆಣಬಿನ ಚಪ್ಪಲಿ, ಅಂದದ ಆಟಿಕೆಗಳು, ಜವಳಿ ಮತ್ತು ಕಚೇರಿಗೆ ಉಪಯುಕ್ತ ಸಾಮಾಗ್ರಿಗಳು ಸೇರಿದಂತೆ ಅನೇಕ ಕರಕುಶಲ ವಸ್ತುಗಳು ಲಭ್ಯವಿವೆ.
ಆಧುನಿಕ ಜೀವನ ಶೈಲಿಗೆ ತಕ್ಕಂತೆ ಸಾಂಪ್ರದಾಯಿಕ ಕರಕುಶಲ ವಸ್ತುಗಳಿಗೆ ಪ್ರೋತ್ಸಾಹ ನೀಡುವುದು ಮೇಳದ ಉದ್ದೇಶ.ಕೃಷ್ಣಮಠಕ್ಕೆ ಬರುವ ದೂರದೂರುಗಳ ಭಕ್ತಾದಿಗಳು ಮೇಳಕ್ಕೆ ಮಾರು ಹೋಗುತ್ತಿದ್ದಾರೆ.
Kshetra Samachara
20/12/2021 06:45 pm