ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಎಂಜಿಎಂ ಕಾಲೇಜಿನಲ್ಲಿ ಪವಿತ್ರ ವಸ್ತುಗಳ ಅಭಿಯಾನ: ಕರಕುಶಲ ವಸ್ತುಗಳಿಗೆ ವಿದ್ಯಾರ್ಥಿಗಳು ಫಿದಾ!

ಉಡುಪಿ: ವೆರೈಟಿ ವೆರೈಟಿ ಡಿಸೈನ್ ನ ಬಟ್ಟೆಗಳು ಮಾರುಕಟ್ಟೆಗೆ ಲಗ್ಗೆ ಇಡುತ್ತಿದ್ದಂತೆ, ಸಾಂಪ್ರದಾಯಿಕ ಬಟ್ಟೆಗಳನ್ನು ಕೇಳುವವರೇ ಇಲ್ಲದಂತಾಗಿದೆ. ಕೈ ಉತ್ಪನ್ನಗಳು ಯಾರಿಗೂ ಬೇಡವಾಗಿದೆ. ಹೀಗಾಗಿ ಕೈ ಮಗ್ಗವನ್ನು ಪ್ರೋತ್ಸಾಹಿಸಿ,ಕರಕುಶಲ ಉತ್ಪನ್ನಗಳನ್ನು ಬೆಳೆಸುವುದಕ್ಕಾಗಿ ಉಡುಪಿಯಲ್ಲಿ "ಪವಿತ್ರ ವಸ್ತುಗಳ ಅಭಿಯಾನ" ಎನ್ನುವ ಹೊಸ ಅಭಿಯಾನ ಶುರುವಾಗಿದೆ. ಏನಿದು ಅಭಿಯಾನ....ನೋಡಿಕೊಂಡು ಬರೋಣ

ಸಾಂಪ್ರದಾಯಿಕ ಬಟ್ಟೆಗಳು ಉಳಿಯಬೇಕು, ನೇಕಾರರಿಗೆ ಪ್ರೋತ್ಸಾಹ ನೀಡಬೇಕು. ಇದರ ಜೊತೆಗೆ ಹಿಂದಿನ ಕಾಲದಿಂದಲೂ ಬಳಕೆಯಲ್ಲಿ ಇದ್ದ ಕೈ ಉತ್ಪನ್ನಗಳನ್ನು ಮತ್ತೆ ಬಳಸುವಂತೆ ಆಗಬೇಕು ಎನ್ನುವ ಒಳ್ಳೆಯ ಉದ್ದೇಶದಿಂದ ಉಡುಪಿ ಎಂಜಿಎಂ ಕಾಲೇಜಿನಲ್ಲಿ

ಚರಕ ಮಹಿಳಾ ವಿವಿಧೋದ್ದೇಶ ಕೈಗಾರಿಕಾ ಸಹಕಾರ ಸಂಘದವರಿಂದ ಪವಿತ್ರ ವಸ್ತುಗಳ ಅಭಿಯಾನ ಎನ್ನುವ ವಿಶೇಷ ಅಭಿಯಾನ ಶುರುವಾಗಿದೆ. ವಿವಿಧ ಕೈ ಮಗ್ಗದ ಬಟ್ಟೆಗಳು, ಕೈ ಉತ್ಪನ್ನಗಳು ಇಲ್ಲಿ ಪ್ರದರ್ಶನಗೊಳ್ಳುತ್ತಿವೆ...

ಬಟ್ಟೆ ಅಂಗಡಿಗಳಲ್ಲಿ ಸಿಗದಿರುವ ಸಾಂಪ್ರದಾಯಿಕ ಬಟ್ಟೆಗಳು ಇಲ್ಲಿ ಸಿಗುವುದರಿಂದ ಕಾಲೇಜು ವಿದ್ಯಾರ್ಥಿನಿಯರು ಸೇರಿದಂತೆ, ಸಾರ್ವಜನಿಕರು ಖುಷಿಯಾಗಿದ್ದಾರೆ. ವಿವಿಧ ರೀತಿಯ ಕೈಮಗ್ಗದ ವಸ್ತ್ರಗಳು,ಕೈ ಉತ್ಪನ್ನಗಳಾದ ಸಣ್ಣ ಬುಟ್ಟಿ, ಬ್ಯಾಗ್‌ಗಳನ್ನು ಪರ್ಚೆಸ್ ಮಾಡಿ ತಯಾರಕರಿಗೆ ಸಹಕಾರ ನೀಡ್ತಿದ್ದಾರೆ..

ಒಟ್ಟಿನಲ್ಲಿ ಮಾಡರ್ನ್ ಲೈಫ್ ಸ್ಟೈಲ್‌ನಿಂದಾಗಿ ಸಾಂಪ್ರದಾಯಿಕ ಬಟ್ಟೆಗಳು,ಕರಕುಶಲ ಉತ್ಪನ್ನಗಳು ಮರೆಯಾಗುತ್ತಿವೆ. ಆದರೆ ಕೈ ಮಗ್ಗದ ಬಟ್ಟೆಗಳನ್ನು ಬಳಸುವುದರಿಂದ ದೇಹಕ್ಕೂ ತಂಪು, ನೇಕಾರರಿಗೂ ಪ್ರೋತ್ಸಾಹ ನೀಡಿದಂತಾಗುತ್ತದೆ. ಜೊತೆಗೆ ನಮ್ಮ ಸಾಂಪ್ರದಾಯಿಕ ವಸ್ತುಗಳನ್ನೂ ಉಳಿಸುದಂತಾಗುತ್ತದೆ.ನೀವೂ ಒಮ್ಮೆ ಎಂಜಿಎಂ ಕಾಲೇಜಿನ ಮಳಿಗೆಗೆ ಭೇಟಿ ನೀಡಿ....

Edited By : Manjunath H D
Kshetra Samachara

Kshetra Samachara

15/09/2021 06:19 pm

Cinque Terre

27.4 K

Cinque Terre

1