ಉಡುಪಿ: ಉಡುಪಿಯಲ್ಲಿ ನಡೆಯುತ್ತಿರುವ ಹಲಸು ,ಜೇನುಮೇಳಕ್ಕೆ ಉತ್ತಮ ಸ್ಪಂದನೆ ದೊರೆತಿದೆ. ಜಿಲ್ಲಾಡಳಿತ, ಜಿಪಂ ಹಾಗೂ ತೋಟಗಾರಿಕೆ ಇಲಾಖೆ ಮೂರು ದಿನಗಳ ಕಾಲ ದೊಡ್ಡಣಗುಡ್ಡೆ ಶಿವಳ್ಳಿ ಮಾದರಿ ತೋಟಗಾರಿಕೆ ಕ್ಷೇತ್ರದ ಪುಷ್ಪ ಹರಾಜು ಕೇಂದ್ರದ ಆವರಣದಲ್ಲಿ ಈ ಮೇಳವನ್ನು ಆಯೋಜಿಸಿದೆ.
ಮೇಳದಲ್ಲಿ ಆರು ಟನ್ನಿಗೂ ಅಧಿಕ ಹಲಸು!
ಮೇಳದಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ ಬೆಳೆಗಾರರು, ಹಲವು ಜಾತಿಯ ಸುಮಾರು ಆರು ಟನ್ ಗೂ ಅಧಿಕ ಹಲಸುಗಳನ್ನು ಮಾರಾಟಕ್ಕೆ ಇಟ್ಟಿದ್ದಾರೆ.
ತೂಬುಗೆರೆಯ ಹಲಸು, ಚೇಳೂರು ಭಾಗದ ಚಂದ್ರ ಹಲಸು ಸೇರಿದಂತೆ ಕೆಂಪು ರುದ್ರಾಕ್ಷಿ ಹಲಸು, ಹಳದಿ ಹಲಸು, ಏಕಾದಶಿ ಹಲಸು, ಶಿವರಾತ್ರಿ ಹಲಸಿನ ಹಣ್ಣುಗಳು ರುಚಿಕರವಾಗಿದ್ದವು. ಜೊತೆಗೆ ಹಲಸಿನ ಹಣ್ಣಿನ ಪದಾರ್ಥ ಗಳಾದ ಹಪ್ಪಳ, ಹೋಳಿಗೆ, ಹಲಸಿನ ಕಡಬು, ಹಲಸಿನ ಕಾಯಿ ಕಬಾಬ್, ಗಟ್ಟಿ, ಸೀರಾ, ಮುಲ್ಕ, ಮಂಚೂರಿ, ಬಜ್ಜಿ, ಚಿಪ್ಸ್, ಹಲಸಿನ ಬೀಜದ ಬಿಸ್ಕೆಟ್, ಹಲಸಿನ ಹಣ್ಣಿನ ಬೀಜದ ಚಪಾತಿ, ಪೌಡರ್ ಮುಂತಾದವುಗಳ ಮಾರಾಟಕ್ಕೆ ಇಡಲಾಗಿದೆ.
ಕಲ್ಪರಸ ಹಾಗೂ ಅದರ ಉತ್ಪನ್ನಗಳು, ಜಿಲ್ಲೆಯ ಅಪರೂಪದ ಬೆಳೆಗಳ ಲ್ಲೊಂದದ ರಂಬೂಟಾನ್ ಹಣ್ಣು, ಜೊತೆಗೆ ಶುದ್ಧ ಜೇನುತುಪ್ಪಕ್ಕೂ ಗ್ರಾಹಕರಿಂದ ಉತ್ತಮ ಬೇಡಿಕೆಗಳು ವ್ಯಕ್ತವಾದವು.
Kshetra Samachara
19/06/2022 10:03 am