ಮಂಗಳೂರು: ಆಹಾರೋತ್ಪನ್ನಗಳಿಗೂ ಸರಕು ಮತ್ತು ಸೇವಾ ತೆರಿಗೆ (ಜಿಎಸ್ ಟಿ) ಹೇರಿಕೆಯ ಬಗ್ಗೆ ಸರಕಾರದ ವಿರುದ್ಧ ಜನಾಕ್ರೋಶ ಕೇಳಿ ಬರುತ್ತಿದೆ. ಅದರಲ್ಲೂ ಮೊಸರು, ಮಜ್ಜಿಗೆ, ಲಸ್ಸಿಯಂತಹ ಪದಾರ್ಥ, ಅಕ್ಕಿ, ಗೋಧಿಗಳಿಗೂ ಜಿಎಸ್ ಟಿ ಹೇರಿಕೆ ಮಾಡಿರುವ ಸರಕಾರದ ನಡೆಯನ್ನು ಜನರು ವಿರೋಧಿಸುತ್ತಿದ್ದಾರೆ.
ಈ ಬಗ್ಗೆ ಮಂಗಳೂರಿನಲ್ಲಿ ಜೆರಾಲ್ಡ್ ಟವರ್ ಮಾತನಾಡಿ, ದುಬಾರಿ ಫ್ಲ್ಯಾಟ್, ಐಷಾರಾಮಿ ಕಾರು, ಎಸಿಯಂತಹ ವಸ್ತುಗಳಿಗೆ ಜಿಎಸ್ ಟಿ ಹೇರಲಿ. ಆದರೆ ಆಹಾರ ವಸ್ತುಗಳಿಗೆ ಜಿಎಸ್ ಟಿ ಹೇರಿಕೆ ಮಾಡೋಲ್ಲ ಎಂದ ಸರಕಾರ ಎಲ್ಲವನ್ನೂ ಜಿಎಸ್ಟಿ ಅಂಡರ್ ತಂದ ಪರಿಣಾಮ ಬಡವರು ಈಗ ತಲೆ ಮೇಲೆ ಕೈಹೊತ್ತು ಕುಳಿತಿದ್ದಾರೆ. ಐಷಾರಾಮಿ ಹೊಟೇಲ್ ಗಳು, ಅದ್ಧೂರಿ ಮದುವೆ ಸಮಾರಂಭಗಳ ಆಹಾರೋತ್ಪನ್ನಗಳಿಗೆ ಜಿಎಸ್ ಟಿ ಹಾಕಲಿ. ಆದರೆ ಬಡವರು ಬಳಸುವ ಆಹಾರೋತ್ಪನ್ನಗಳಿಗೆ ಜಿಎಸ್ ಟಿ ಅಳವಡಿಕೆ ಬೇಡ ಎಂದು ಹೇಳಿದರು.
ಕೊರೊನಾದ ಅವೈಜ್ಞಾನಿಕ ಕಾನೂನುಗಳಿಂದ ಜನರು ಸೋತು ಹೋಗಿದ್ದಾರೆ. ಇದೀಗ ಜಿಎಸ್ ಟಿ ಹೇರಿಕೆಯಿಂದ ಬಡತನದಿಂದಲೇ ಜನ ಸಾಯುತ್ತಾರೆ. ಆದ್ದರಿಂದ ಸರಕಾರ ಜಿಎಸ್ ಟಿ ಹೇರಿಕೆಯ ಬಗ್ಗೆ ಮರು ಪರಿಶೀಲನೆ ಮಾಡಬೇಕು ಎಂದು ಹೇಳಿದರು.
Kshetra Samachara
19/07/2022 06:08 pm