ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಟರ್ನ್ ಮಾಡಲೆಂದು ಹೋಗಿ ರೈಲ್ವೆ ಹಳಿಗೆ ಬಿದ್ದ ಕಂಟೈನರ್ ಲಾರಿ

ಮಂಗಳೂರು: ಪಾರ್ಸೆಲ್ ಗಳನ್ನು ಹೊತ್ತು ತಂದಿದ್ದ ಕಂಟೈನರ್ ಲಾರಿಯೊಂದು ಟರ್ನ್ ಮಾಡಲು ಹೋಗಿ ರೈಲ್ವೆ ಹಳಿಯ ಮೇಲೆಯೇ ಬಿದ್ದಿರುವ ಘಟನೆ ಗುರುವಾರ ರಾತ್ರಿ 8.30 ಸುಮಾರಿಗೆ ನಗರದ ಬೈಕಂಪಾಡಿ ಇಂಡಸ್ಟ್ರಿಯಲ್ ಏರಿಯಾ ಬಳಿ ನಡೆದಿದೆ.

ಬೈಕಂಪಾಡಿ ಇಂಡಸ್ಟ್ರಿಯಲ್ ಏರಿಯಾದ ಜುಮ್ಮಾ ಮಸೀದಿ ಬಳಿಯಿರುವ ಡೆಲಿವರಿ ಪಾರ್ಸೆಲ್ ಸಂಸ್ಥೆಗೆ ಸರಕುಗಳನ್ನು ಈ ಕಂಟೈನರ್ ಲಾರಿ ಹೊತ್ತು ತಂದಿತ್ತು. ಪಾರ್ಸೆಲ್ ಗಳನ್ನು ಅನ್ಲೋಡ್ ಮಾಡಲೆಂದು ಕಂಟೈನರ್ ಲಾರಿಯನ್ನು ಚಾಲಕ ಟರ್ನ್ ಮಾಡುತ್ತಿದ್ದ. ಈ ವೇಳೆ ಲಾರಿ ಆಯತಪ್ಪಿ ರೈಲ್ವೆ ಹಳಿಯ ಮೇಲೆಯೇ ಬಿದ್ದಿದೆ‌.

ಗೂಡ್ಸ್ ರೈಲು ಬರುವ ರೈಲು ಹಳಿಯ ಮೇಲೆಯೇ ಕಂಟೈನರ್ ಲಾರಿ ಬಿದ್ದಿದೆ. ಈಗಾಗಲೇ ಈ ಹಳಿಯ ಮೂಲಕ ಬರುವ ಗೂಡ್ಸ್ ರೈಲುಗಳನ್ನು ನಿಲುಗಡೆ ಮಾಡಲಾಗಿದೆ‌. ಲಾರಿಯನ್ನು ಕ್ರೇನ್ ಮೂಲಕ ಮೇಲಕ್ಕೆತ್ತುವ ಪ್ರಯತ್ನವನ್ನು ಮಾಡಲಾಗುತ್ತಿದೆ.

Edited By : Abhishek Kamoji
Kshetra Samachara

Kshetra Samachara

07/10/2022 10:11 am

Cinque Terre

6.3 K

Cinque Terre

0