ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪೆರುವಾಯಿ: ಚಲಿಸುತ್ತಿದ್ದ ಬಸ್‌ನಿಂದ ಬಿದ್ದ ಪ್ರಯಾಣಿಕ- ಗಂಭೀರ ಗಾಯ

ವಿಟ್ಲ: ಪೆರುವಾಯಿ ಗ್ರಾಮದ ಕೆದುವಾರು ಎಂಬಲ್ಲಿ ಚಲಿಸುತ್ತಿದ್ದ ಕೆಎಸ್‌ಆರ್ ಟಿಸಿ ಬಸ್‌ನಿಂದ ಪ್ರಯಾಣಿಕ ಗಂಭೀರ ಗಾಯಗೊಂಡ ಘಟನೆ ಸಂಭವಿಸಿದೆ.

ಕೆದುವಾರು ನಿವಾಸಿ ಇನಾಸ್ ಡಿ ಸೋಜಾ ಗಾಯಗೊಂಡವರು. ಅವರು ಸೆ.15ರಂದು ವಿಟ್ಲ ಪೇಟೆಯಿಂದ ವಿಟ್ಲ ಪಕಳಕುಂಜ ಕಡೆಗೆ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದಾಗ ಕೆದುವಾರು ಎಂಬಲ್ಲಿ ಬಸ್ ಇಳಿಯಲು ನಿಂತಿದ್ದರು. ಈ ವೇಳೆ ತಿರುವು ರಸ್ತೆಯಲ್ಲಿ ಚಾಲಕ ಏಕಾಏಕಿ ಅಜಾಗರೂಕತೆ ಮತ್ತು ನಿರ್ಲಕ್ಷ್ಯತನದಿಂದ ಬಸ್‌ ಅನ್ನು ಚಲಾಯಿಸಿದ್ದರಿಂದ ಬಸ್‌ನ ಹಿಂಬದಿಯ ಬಾಗಿಲಿನಿಂದ ಇನಾಸ್ ಡಿ ಸೋಜಾ ರಸ್ತೆಗೆ ಬಿದ್ದಿದ್ದಾರೆ. ಪರಿಣಾಮ ತಲೆಗೆ ಮತ್ತು ದೇಹದ ಇತರ ಭಾಗಗಳಿಗೆ ಗಾಯವಾಗಿದೆ. ಇನಾಸ್ ಡಿಸೋಜಾ ಅವರು ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Edited By : Vijay Kumar
Kshetra Samachara

Kshetra Samachara

16/09/2022 02:53 pm

Cinque Terre

5.22 K

Cinque Terre

0