ಪುತ್ತೂರು: ಕುಂಬ್ರ ಸಮೀಪದ ಪರ್ಪುಂಜದಲ್ಲಿ ಮರದ ಗೆಲ್ಲು ಕಡಿಯುವ ವೇಳೆ ವಿದ್ಯುತ್ ಶಾಕ್ ಹೊಡೆದು ಮೆಸ್ಕಾಂ ಪವರ್‌ಮ್ಯಾನ್ ಓರ್ವರು ಮೃತಪಟ್ಟ ದಾರುಣ ಘಟನೆ ಜು.12ರಂದು ಮಧ್ಯಾಹ್ನ ನಡೆದಿದೆ.
ಮೆಸ್ಕಾಂ ಕುಂಬ್ರ ಶಾಖೆಯ ಪವರ್‌ಮ್ಯಾನ್ ಬಸವರಾಜ್ (26ವ) ಮೃತಪಟ್ಟವರು ಎಂದು ಮಾಹಿತಿ ಲಭ್ಯವಾಗಿದೆ. ಇವರು ಮೂಲತಃ ಬಿಜಾಪುರ ನಿವಾಸಿಯಾಗಿದ್ದು ಕೆಲವು ಸಮಯಗಳಿಂದ ಮೆಸ್ಕಾಂನಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು.
ಲೈನ್ ಮ್ಯಾನ್ ಗಳು ದುರಸ್ತಿ ಕಾರ್ಯ ಮಾಡುವ ಸಂದರ್ಭದಲ್ಲಿ ವಿದ್ಯುತ್ ಸಂಪರ್ಕವನ್ನು ನಿಲ್ಲಿಸದ ಮೆಸ್ಕಾಂ ಅಧಿಕಾರಗಳ ವಿರುದ್ಧ ಸಾರ್ವಜನಿಕರು ಹಾಗು ಲೈನ್ ಮ್ಯಾನ್ ಗಳು ಆಕ್ರೋಶ ಹೊರ ಹಾಕಿದ್ದಾರೆ.
Kshetra Samachara
12/07/2022 04:17 pm