ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪಡುಬಿದ್ರಿ ಬ್ರೇಕಿಂಗ್ ನ್ಯೂಸ್ : ದ್ವಿಚಕ್ರ ಸವಾರನ ಮೇಲೆ ಮಗುಚಿದ ಲಾರಿ: ದ್ವಿಚಕ್ರ ಸವಾರ ಸಾವು!

ಪಡುಬಿದ್ರೆ: ಲಾರಿಯೊಂದು ದ್ವಿಚಕ್ರ ವಾಹನ ಸವಾರನ ಮೇಲೆ ಮಗುಚಿ ಬಿದ್ದು ,ದ್ವಿಚಕ್ರ ವಾಹನ ಸವಾರ ಸ್ಥಳದಲ್ಲೇ ಮೃತಪಟ್ಟ ದಾರುಣ ಘಟನೆ ಪಡುಬಿದ್ರೆಯಲ್ಲಿ ಸಂಭವಿಸಿದೆ.ಸಂಶುದ್ದೀನ್ ಮೃತ ದ್ವಿಚಕ್ರ ವಾಹನ ಸವಾರ.

ಲಾರಿ ಉಡುಪಿ ಕಡೆಯಿಂದ ಮಂಗಳೂರು ಕಡೆಗೆ ತೆರಳುತ್ತಿತ್ತು.ಪಡುಬಿದ್ರಿ ಜಂಕ್ಷನ್ ನಲ್ಲಿ ನಿಯಂತ್ರಣ ತಪ್ಪಿದ ಲಾರಿ ದ್ವಿಚಕ್ರ ವಾಹನದ ಮೇಲೆ ಬಿದ್ದಿದೆ. ದ್ವಿಚಕ್ರ ಸವಾರ ಸಂಶುದ್ದೀನ್ ಅವರು ಸ್ಥಳದಲ್ಲೇ ಮೃತಪಟ್ಟಿರುವುದಾಗಿ ತಿಳಿದುಬಂದಿದೆ.ಘಟನಾ ಸ್ಥಳಕ್ಕೆ ಪಡುಬಿದ್ರಿ ಪೊಲೀಸರು ಭೇಟಿ ನೀಡಿದ್ದಾರೆ.

Edited By : Shivu K
Kshetra Samachara

Kshetra Samachara

05/07/2022 12:55 pm

Cinque Terre

19.87 K

Cinque Terre

3