ಮುಲ್ಕಿ: ಕಿನ್ನಿಗೊಳಿ ಮುಲ್ಕಿ ರಾಜ್ಯ ಹೆದ್ದಾರಿಯ ಕಾರ್ನಾಡ್ ಚರಂತಿಪೇಟೆ ಬಳಿ ಬಸ್ಸೊಂದು ಕಾರಿಗೆ ಹಾಗೂ ಹಳೆ ಕಟ್ಟಡಕ್ಕೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ.
ಮಂಗಳೂರಿನಿಂದ ಮುಲ್ಕಿ ಕಡೆಗೆ ಹೋಗುತ್ತಿದ್ದ ಸರ್ವಿಸ್ ಬಸ್ ಕಾರ್ನಾಡ್ ಒಳಪೇಟೆಯ ಚರಂತಿಪೇಟೆ ಬಳಿ ಕಾರಿಗೆ ಹಾಗೂ ಹೆದ್ದಾರಿ ಬದಿಯ ಹಳೆ ಮಿಲ್ ಅಂಗಡಿಯ ಕಟ್ಟಡಕ್ಕೆ ಡಿಕ್ಕಿ ಹೊಡೆದಿದೆ.
ಅಪಘಾತದ ತೀವ್ರತೆಗೆ ಬಸ್ಸಿನಲ್ಲಿದ್ದ ಮೂವರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು ಬಸ್ಸು ಸಂಪೂರ್ಣ ಜಖಂಗೊಂಡಿದ್ದು ಕಾರಿಗೆ ಹಾಗೂ ಮಿಲ್‌ನ ಅಂಗಡಿಯ ಒಂದು ಪಾರ್ಶ್ವಕ್ಕೆ ಹಾನಿಯಾಗಿದೆ.
ಅಪಘಾತದಿಂದ ರಾಜ್ಯ ಹೆದ್ದಾರಿ ಸಂಚಾರ ಕೆಲ ಹೊತ್ತು ಅಸ್ತವ್ಯಸ್ತಗೊಂಡಿದ್ದು ಕೂಡಲೇ ಟ್ರಾಫಿಕ್ ಪೊಲೀಸರು ಹಾಗೂ ಸ್ಥಳೀಯರು ಸೇರಿ ಬಸ್ಸು ಹಾಗೂ ಕಾರನ್ನು ಸ್ಥಳದಿಂದ ತೆರವುಗೊಳಿಸಿದ್ದಾರೆ.
ಅಪಘಾತಕ್ಕೆ ಬಸ್ಸಿನ ಚಾಲಕನ ಅತಿ ವೇಗದ ಚಾಲನೆ ಕಾರಣ ಎಂದು ಸ್ಥಳೀಯರು ತಿಳಿಸಿದ್ದಾರೆ.
Kshetra Samachara
04/07/2022 07:58 pm