ಮುಲ್ಕಿ: ರಾಷ್ಟ್ರೀಯ ಹೆದ್ದಾರಿ 66ರ ಕೊಲ್ನಾಡು ಗುಂಡಾಲುಗುತ್ತು ಬಳಿ ಇಂದು ಮುಂಜಾನೆ 3.45ರ ಸುಮಾರಿಗೆ ಕಾರು ಪಲ್ಟಿಯಾಗಿ ಮೂವರು ಪವಾಡಸದೃಶವಾಗಿ ಪಾರಾಗಿದ್ದಾರೆ.
ಮಂಗಳೂರಿನಿಂದ ಪಡುಬಿದ್ರಿ ಕಡೆಗೆ ಹೋಗುತ್ತಿದ್ದ ರಿಜ್ ಕಾರು ಕೊಲ್ನಾಡು ಗುಂಡಾಲುಗುತ್ತು ತಲುಪುತ್ತಿದ್ದಂತೆಯೇ ಚಾಲಕನ ನಿಯಂತ್ರಣ ತಪ್ಪಿ ಹೆದ್ದಾರಿ ಬದಿಯ ಮೈಲಿಗಲ್ಲಿಗೆ ಹೊಡೆದು ಪಲ್ಟಿಯಾಗಿ ಬಿದ್ದಿತು. ಕಾರು ಚಾಲಕ ಮತ್ತು ಇಬ್ಬರು ಪ್ರಯಾಣಿಕರು ಅಲ್ಪಸ್ವಲ್ಪ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಅಪಘಾತದ ರಭಸಕ್ಕೆ ಕಾರು ಜಖಂಗೊಂಡಿದ್ದು, ಎರಡು ಮೈಲಿಗಲ್ಲು ಚೂರಾಗಿದೆ. ಗಾಯಾಳುಗಳನ್ನು ಪಡುಬಿದ್ರಿ ನಿವಾಸಿಗರು ಎಂದು ತಿಳಿದುಬಂದಿದೆ. ಸ್ಥಳಕ್ಕೆ ಮುಲ್ಕಿ ಠಾಣಾ ಎಎಸ್ಸೈ ಕೃಷ್ಣಪ್ಪ, ಟ್ರಾಫಿಕ್ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದರು.
Kshetra Samachara
28/06/2022 11:44 am