ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಶೋರೂಂ ನಲ್ಲಿ ಅಗ್ನಿ ದುರಂತ: ಸುಟ್ಟು ಕರಕಲಾದ ವಾಹನಗಳು!

ಮಂಗಳೂರು: ನಗರದ ನಾಗುರಿಯಲ್ಲಿ ಕಾರ್ಯಾಚರಿಸುತ್ತಿದ್ದ ಎಲೆಕ್ಟ್ರಿಕ್ ದ್ವಿಚಕ್ರ ವಾಹನದ ಶೋರೂಂನಲ್ಲಿ ಇಂದು ಬೆಳಗ್ಗೆ ಅಗ್ನಿದುರಂತ ಸಂಭವಿಸಿದ, ಪರಿಣಾಮ ಶೋರೂಂನಲ್ಲಿರುವ ಲಕ್ಷಾಂತರ ರೂ. ಮೌಲ್ಯದ ಎಲೆಕ್ಟ್ರಿಕ್ ಸ್ಕೂಟರ್ ಗಳು ಅಗ್ನಿಗಾಹುತಿಯಾಗಿವೆ.

ಪ್ರಶಾಂತ್ ಎಂಬವರ ಮಾಲಕತ್ವದ ಈ ಒಕಿನವ ಎಲೆಕ್ಟ್ರಿಕ್ ಸ್ಕೂಟರ್ ಶೋರೂಂನಲ್ಲಿ ಈ ಅಗ್ನಿ ದುರಂತ ಸಂಭವಿಸಿದೆ. ಇಡೀ ಕಟ್ಟಡದಲ್ಲಿ ಹೊಗೆಯು ತುಂಬಿಕೊಂಡಿದ್ದು, ಮೇಲಿನ ಅಂತಸ್ತಿನಲ್ಲಿ ಕಟ್ಟಡದ ಮಾಲಕರ ಕುಟುಂಬ ವಾಸವಾಗಿದೆ. ಆದರೆ ಯಾವುದೇ ಸಾವು - ನೋವು ಸಂಭವಿಸಿಲ್ಲ.

ಶಾರ್ಟ್ ಸರ್ಕ್ಯೂಟ್ ನಿಂದ ಈ ಅಗ್ನಿದುರಂತ ಸಂಭವಿಸಿರಬಹುದು ಎಂದು ಶಂಕಿಸಲಾಗಿದೆ. ತಕ್ಷಣ ಪಾಂಡೇಶ್ವರ ಠಾಣಾ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಬೆಂಕಿ ನಂದಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ.

ಬೆಳಗ್ಗೆ 8 ಗಂಟೆಯಿಂದಲೇ ಕಟ್ಟಡದಲ್ಲಿ ಆಗಾಗ ವಿದ್ಯುತ್ ಪವರ್ ಕಟ್ ಆಗೋದು ಮತ್ತೆ ಬರೋದು ಆಗುತ್ತಿತ್ತು. ಆದರೆ 9ಗಂಟೆಯ ಹೊತ್ತಿಗೆ ಎಲೆಕ್ಟ್ರಿಕ್ ವಾಹನದ ಶೋರೂಂ ಒಳಗಿನಿಂದ ಹೊಗೆ ಕಾಣಿಸಲಾರಂಭಿಸಿದೆ. ತಕ್ಷಣ ಎಚ್ಚೆತ್ತ ನಾವು ಅಗ್ನಿಶಾಮಕದಳಕ್ಕೆ ಕರೆ ಮಾಡಿದ್ದೇವೆ ಎಂದು ಕಟ್ಟಡದ ಮಾಲಕ ಸಿರಾಜ್ ಮಾಹಿತಿ ನೀಡಿದ್ದಾರೆ.

Edited By : Manjunath H D
Kshetra Samachara

Kshetra Samachara

24/06/2022 10:23 am

Cinque Terre

15.4 K

Cinque Terre

0