ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗುರುಪುರ: ಶಾಲಾ ಬಸ್‍ಗೆ ಟಿಪ್ಪರ್ ಡಿಕ್ಕಿ, ಮೂವರು ಮಕ್ಕಳಿಗೆ ಗಾಯ

ಬಜಪೆ :ಶಾಲೆಯ ಮಕ್ಕಳನ್ನು ಮನೆಗೆ ಸಾಗಿಸುತ್ತಿದ್ದ ಶಾಲಾ ಬಸ್‍ಗೆ ಟಿಪ್ಪರ್ ಡಿಕ್ಕಿಯಾದ ಘಟನೆ ಗುರುಪುರ ಸಮೀಪದ ಅಣೆ ಬಳಿ ನಿನ್ನೆ ಸಂಜೆ ನಡೆದಿದೆ.ಘಟನೆಯಲ್ಲಿ ಬಸ್‍ನ ನಿರ್ವಾಹಕ ಹಾಗೂ ಇತರ ಮೂವರು ಮಕ್ಕಳಿಗೆ ಗಾಯಗಳಾಗಿದೆ.

ಎರಡೂ ವಾಹನಗಳು ಮಂಗಳೂರಿನತ್ತ ಸಾಗುತ್ತಿತ್ತು. ವೇಗವಾಗಿದ್ದ ಟಿಪ್ಪರ್, ಶಾಲಾ ಬಸ್‍ಗೆ ಡಿಕ್ಕಿ ಹೊಡೆದಿದ್ದು, ಟಿಪ್ಪರ್ ಎದುರು ಭಾಗವು ನುಜ್ಜುಗುಜ್ಜಾಗಿದೆ. ಆರು ಮಕ್ಕಳನ್ನು ಸ್ಥಳೀಯ ಮನೆಗಳಿಗೆ ತಲುಪಿಸಿ ನಿಂತಿದ್ದ ಬಸ್ ಹತ್ತಲು ಪ್ರಯತ್ನಿಸಿದಾಗ ಹಿಂದಿನಿಂದ ವೇಗವಾಗಿ ಬಂದ ಟಿಪ್ಪರ್ ಬಸ್‍ಗೆ ಡಿಕ್ಕಿಯಾಗಿದೆ. ಆ ವೇಳೆ ನಿರ್ವಾಹಕ ಮೋನು ಬಸ್‍ನ ಫುಟ್‍ಬೋರ್ಡ್‍ನಿಂದ ಕೆಳಗಡೆ ಬಿದ್ದು ಗಾಯಗೊಂಡಿದ್ದಾರೆ. ಮೋನು ಅವರ ಕಾಲು ಮತ್ತು ತಲೆಗೆ ಗಂಭೀರ ಗಾಯವಾಗಿದೆ. ಡಿಕ್ಕಿಯಾದ ರಭಸಕ್ಕೆ ಬಸ್‍ನೊಳಗಿದ್ದ ಮೂವರು ಮಕ್ಕಳಿಗೆ ಗಾಯವಾಗಿದೆ.

ಗಾಯಾಳು ನಾಲ್ವರನ್ನು ತಕ್ಷಣ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಸಾಗಿಸಲಾಗಿದೆ. ಚಿಕಿತ್ಸೆ ಬಳಿಕ ಇಬ್ಬರು ಮಕ್ಕಳು ಬಿಡುಗಡೆಯಾಗಿದ್ದಾರೆ ಎನ್ನಲಾಗಿದೆ. ಅಪಘಾತದಲ್ಲಿ ಟಿಪ್ಪರ್ ಎದುರು ಸಂಪೂರ್ಣ ನುಜುಗುಜ್ಜಾಗಿದ್ದು, ಬಸ್ ಹಿಂಬದಿಗೆ ಸ್ವಲ್ಪ ಹಾನಿಯಾಗಿದ್ದರೆ, ಶಾಲಾ ಬಸ್‍ನ ನಿರ್ವಾಹಕಗೆ ಗಂಭೀರ ಗಾಯವಾಗಿದೆ ಎಂದು ತಿಳಿದುಬಂದಿದೆ.

Edited By : Nagaraj Tulugeri
Kshetra Samachara

Kshetra Samachara

02/06/2022 07:43 am

Cinque Terre

10.67 K

Cinque Terre

0