ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಬಸ್ ಬ್ರೇಕ್ ಫೇಲ್ ಆದರೂ ಚಾಲಕನ ಸಮಯ ಪ್ರಜ್ಞೆಯಿಂದ ತಪ್ಪಿದ ಅನಾಹುತ!

ಉಡುಪಿ: ಮಂಗಳೂರಿನಿಂದ ಉಡುಪಿಗೆ ಅಗಮಿಸುತ್ತಿದ್ದ ಖಾಸಗಿ ಬಸ್ಸೊಂದರ ಬ್ರೇಕ್ ಫೈಲ್ ಆದರೂ ಚಾಲಕನ ಸಮಯ ಪ್ರಜ್ಞೆಯಿಂದ ಭಾರೀ ಅನಾಹುತ ನಡೆಯುವುದು ತಪ್ಪಿದೆ.ಇದು ನಡೆದಿದ್ದು ಉಡುಪಿ ಬಸ್ ನಿಲ್ದಾಣದಲ್ಲಿ.

ಮಂಗಳೂರಿನಿಂದ ಉಡುಪಿಗೆ ಅಗಮಿಸಿದ ಬಸ್ಸಿನಲ್ಲಿ ತಾಂತ್ರಿಕ ಸಮಸ್ಯೆ ಕಂಡು ಬಂದಿತ್ತು.ಅದರೂ ಪ್ರಯಾಣಿಕರಿದ್ದ ಕಾರಣ ನಗರದವರೆಗೆ ಬಸ್ಸನ್ನು ಚಾಲಾಯಿಸಿಕೊಂಡು ಬರಲಾಗಿತ್ತು.

ಸರ್ವಿಸ್ ಬಸ್ ನಿಲ್ದಾಣ ಸಮೀಪಿಸುತ್ತಿದ್ದಂತೆ ಬಸ್ ಇಂಜಿನ್ ಏಕಾ ಏಕಿ ಬಂದ್ ಅಗಿ, ಬ್ರೇಕ್ ಹಿಡಿಯದೇ ಚಲಿಸಲು ಅರಂಭಿಸಿತ್ತು.ರಸ್ತೆಯ ಎಡಗಡೆ ಹಲವು ಗೂಡಂಗಡಿಗಳು ಹಾಗೂ ಪಾರ್ಕಿಂಗ್ ಮಾಡಿದ ವಾಹನಗಳಿದ್ದವು. ಬಸ್ಸಿನಲ್ಲಿ ಹಲವು ಪ್ರಯಾಣಿಕರಿದ್ದ ಕಾರಣ ,ಚಾಲಕ ಬಸ್ ನ್ನು ತನ್ನ ಸಮಯ ಪ್ರಜ್ಞೆಯಿಂದ ಫುಟ್ ಪಾತ್ ಮೇಲೆ ಹತ್ತಿಸಿದ್ದಾರೆ.ಆಗ ಬಸ್ ನಿಂತಿದೆ.ಹೀಗಾಗಿ ಬಸ್ ನಲ್ಲಿದ್ದ ಪ್ರಯಾಣಿಕರು ಹಾಗೂ ರಸ್ತೆ ಪಕ್ಕದಲ್ಲಿದ್ದ ಪಾದಚಾರಿಗಳಿಗೆ ಯಾವುದೇ ಜೀವಪಾಯವಿಲ್ಲದೆ ಪಾರಾಗಿದ್ದಾರೆ.ಚಾಲಕನ ಸಮಯ ಪ್ರಜ್ಞೆಯನ್ನು ಸಾರ್ವಜನಿಕರು ಮುಕ್ತ ಕಂಠದಿಂದ ಪ್ರಶಂಸಿದ್ದಾರೆ.

Edited By : Nagaraj Tulugeri
Kshetra Samachara

Kshetra Samachara

30/04/2022 10:16 pm

Cinque Terre

9.1 K

Cinque Terre

6

ಸಂಬಂಧಿತ ಸುದ್ದಿ