ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾರ್ಕಳ: ನಿಲ್ಲಿಸಿದ್ದ ಕಾರಿಗೆ ಬಸ್ ಡಿಕ್ಕಿ: ಓರ್ವ ಸಾವು ,ಮತ್ತೊಬ್ಬರಿಗೆ ಗಾಯ

ಕಾರ್ಕಳ : ರಸ್ತೆ ಬದಿ ನಿಲ್ಲಿಸಿದ್ದ ಕಾರಿಗೆ ಬಸ್ ಢಿಕ್ಕಿ ಹೊಡೆದ ಪರಿಣಾಮ ಓರ್ವ ಸಾವನ್ನಪ್ಪಿ, ಮತ್ತೋರ್ವ ಗಾಯಗೊಂಡ ಘಟನೆ ಕಾರ್ಕಳ ತಾಲೂಕಿನ ಕರಿಯಕಲ್ಲು ರುದ್ರಭೂಮಿಯ ಹತ್ತಿರ ನಡೆದಿದೆ.ಮೃತರನ್ನು ಗದಗ ಮೂಲದ ಕಾರ್ಕಳ ಜೋಡುರಸ್ತೆಯ ನಿವಾಸಿ ಗಿರೀಶ್ ಛಲವಾದಿ (38) ಎಂದು ಗುರುತಿಸಲಾಗಿದೆ. ಗಾಯಗೊಂಡಿರುವ ಕೃಷ್ಣ(22) ಎಂಬವರು ಕಾರ್ಕಳ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯು ತ್ತಿದ್ದಾರೆ.

ಗಿರೀಶ್ ಬಾವಿ ಕೆಲಸಕ್ಕಾಗಿ ಕೆಲಸದವರನ್ನು ತಮ್ಮ ಕಾರಿನಲ್ಲಿ ಜೋಡುರಸ್ತೆಯಿಂದ ಬಜಗೋಳಿಗೆ ಹೊರಟಿದ್ದು, ದಾರಿ ಮಧ್ಯೆ ಕಾರು ಕೆಟ್ಟಿದ್ದರಿಂದ ರಸ್ತೆ ಬದಿ ನಿಲ್ಲಿಸಿದ್ದರು. ಗಿರೀಶ್ ಕಾರಿನ ಬಳಿ ನಿಂತುಕೊಂಡಿದ್ದರೆ, ಕೃಷ್ಣ ಕಾರಿನ ಮುಂಭಾಗದಲ್ಲಿ ನಿಂತುಕೊಂಡಿದ್ದರು. ಈ ವೇಳೆ ಪುಲ್ಕೇರಿ ಕಡೆಯಿಂದ ಬಂದ ಬಸ್ ಢಿಕ್ಕಿ ಹೊಡೆಯಿತ್ತೆನ್ನಲಾಗಿದೆ.ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Edited By : Nirmala Aralikatti
Kshetra Samachara

Kshetra Samachara

25/04/2022 01:25 pm

Cinque Terre

11.76 K

Cinque Terre

0

ಸಂಬಂಧಿತ ಸುದ್ದಿ