ಮಲ್ಪೆ: ಸೈಂಟ್ ಮೇರಿಸ್ ದ್ವೀಪದಲ್ಲಿ ಸೆಲ್ಫಿ ತೆಗೆಯಲು ಹೋಗಿ ನೀರುಪಾಲಾಗಿದ್ದ ಮತ್ತೋರ್ವ ಯುವಕನ ಶವ ಪತ್ತೆಯಾಗಿದೆ. ಪ್ರವಾಸಕ್ಕೆ ಬಂದಿದ್ದ ಬೆಂಗಳೂರಿನ ಜಿಕೆವಿಕೆ ಕೃಷಿ ಕಾಲೇಜಿನ ಇಬ್ಬರು ವಿದ್ಯಾರ್ಥಿಗಳು ನೀರು ಪಾಲಾಗಿದ್ದರು. ಈ ಪೈಕಿ ಓರ್ವನ ಶವ ಮಾತ್ರ ಮಧ್ಯಾಹ್ನ ಸಿಕ್ಕಿತ್ತು.
ಇದೀಗ ಮುಳುಗು ತಜ್ಞರಾದ ಈಶ್ವರ್ ಮಲ್ಪೆ ಮತ್ತು ಲೈಫ್ ಗಾರ್ಡ್ ಮಧು ನೇತೃತ್ವದಲ್ಲಿ ಸತತ ಕಾರ್ಯಾಚರಣೆ ಬಳಿಕ ಮತ್ತೋರ್ವನ ಮೃತದೇಹ ಸಿಕ್ಕಿದೆ.ಹಾವೇರಿ ಮೂಲದ ಸತೀಶ್ ಶವ ಮಧ್ಯಾಹ್ನವೇ ಸಿಕ್ಕಿದ್ದರೆ ,ಬಾಗಲಕೋಟೆ ಮೂಲದ ಸತೀಶ್(21) ಎಂಬ ವಿದ್ಯಾರ್ಥಿಯ ಮೃತದೇಹ ಸಂಜೆ ವೇಳೆ ಸಿಕ್ಕಿದೆ. 68 ವಿದ್ಯಾರ್ಥಿಗಳ ತಂಡದಲ್ಲಿ ಇವರಿಬ್ಬರು ಅಪಾಯದ ಸೂಚನೆ ಲೆಕ್ಕಿಸದೆ ಸೆಲ್ಫಿ ತೆಗೆಯಲು ಹೋಗಿ ನೀರಿಗೆ ಬಿದ್ದಿದ್ದರು.
PublicNext
18/04/2022 10:49 pm