ಮುಲ್ಕಿ: ಸುರತ್ಕಲ್ ಸಮೀಪದ ಲೈಟ್ ಹೌಸ್ ಬೀಚ್ ನಲ್ಲಿ ಮೃತರ ಕ್ರಿಯಾ ಕರ್ಮ ನಡೆಸಲು ಬಂದ 15 ಜನರ ಪೈಕಿ ಇಬ್ಬರು ಯುವತಿಯರು ಸಮುದ್ರ ಪಾಲಾದ ದಾರುಣ ಘಟನೆ ಭಾನುವಾರ ನಡೆದಿದೆ.
ಮೃತರನ್ನು ಮಂಗಳೂರು ಮೂಲದ ತೃಷಾ(17), ವೈಷ್ಣವಿ(18) ಎಂದು ಗುರುತಿಸಲಾಗಿದೆ.
ಸುಮಾರು ಹದಿನೈದು ಜನ ಮಂಗಳೂರಿನಿಂದ ಸುರತ್ಕಲ್ ಬಳಿಯ ಸಂಬಂಧಿಕರ ಮನೆಗೆ ಮೃತರ ಕ್ರಿಯಾ ಕರ್ಮ ನಡೆಸಲು ಬಂದಿದ್ದರು ಎನ್ನಲಾಗಿದ್ದು ಅಂತಿಮ ವಿಧಿವಿಧಾನ ನಡೆಸಲು ಸಮುದ್ರದ ಬಳಿ ತೆರಳಿದ್ದರು.
ವಿಧಿವಿಧಾನ ನಡೆದು ಎಲ್ಲರೂ ವಾಪಸ್ ಬಂದ ಬಳಿಕ ಇಬ್ಬರು ಯುವತಿಯರು ಈಜಾಡಲು ಸಮುದ್ರಕ್ಕೆ ತೆರಳಿದ್ದು ಸಮುದ್ರದಲ್ಲಿ ಬಂದ ಭಾರೀ ಅಲೆ ಇಬ್ಬರನ್ನು ಕೊಚ್ಚಿಕೊಂಡು ಹೋಗಿದೆ ಎನ್ನಲಾಗಿದೆ.
ತಕ್ಷಣ ಸ್ಥಳೀಯರು ಇಬ್ಬರನ್ನು ಇಬ್ಬರನ್ನು ರಕ್ಷಿಸಿ ಮುಕ್ಕ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೆ ದಾಖಲಿಸಿದ್ದರೂ ಪ್ರಯೋಜನವಾಗದೆ ಮೃತಪಟ್ಟಿದ್ದಾರೆ.
ಸುರತ್ಕಲ್ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.
Kshetra Samachara
10/04/2022 11:59 am