ಮಂಗಳೂರು : ಎ.8 ರ ಮಧ್ಯಾಹ್ನ ವೇಳೆ ಭಾರೀ ದುರಂತವೊಂದು ಕ್ಷಣಾರ್ಧದಲ್ಲಿ ತಪ್ಪಿರುವ ಘಟನೆಯೊಂದು ಮಂಗಳೂರು ನಗರದ ಹೃದಯ ಭಾಗದ ಹಂಪನಕಟ್ಟೆಯ ಸಿಗ್ನಲ್ ನಲ್ಲಿ ನಡೆದಿತ್ತು.
ಇದೀಗ ಈ ದುರಂತದ ಸಂದರ್ಭದಲ್ಲಿ ಪ್ರಯಾಣಿಕರೊಬ್ಬರು ಕೆಲವೇ ಕ್ಷಣಗಳಲ್ಲಿ ಪಾರಾಗಿರುವ ಸಿಸಿ ಕ್ಯಾಮೆರಾ ದೃಶ್ಯವೊಂದು ವೈರಲ್ ಆಗಿವೆ.
ನಿನ್ನೆಯ ಮಧ್ಯಾಹ್ನ ಖಾಸಗಿ ಸಿಟಿ ಬಸ್ ಮತ್ತು ಬೈಕ್ ನಡುವೆ ಅಪಘಾತವಾಗಿತ್ತು ಈ ವೇಳೆ ಬೈಕ್ ಬಸ್ ಗೆ ಡಿಕ್ಕಿ ಹೊಡೆದ ರಭಸಕ್ಕೆ ಬೈಕ್ ನಲ್ಲಿದ್ದ ಪೆಟ್ರೋಲ್ ಹೊರಚೆಲ್ಲಿ ಎರಡು ವಾಹನಗಳಿಗೆ ಬೆಂಕಿ ಆವರಿಸಿತ್ತು.
ನಡುರಸ್ತೆಯಲ್ಲಿಯೇ ಎರಡೂ ವಾಹನಗಳು ಕ್ಷಣಾರ್ಧದಲ್ಲಿಯೇ ಧಗಧಗಿಸಿದ್ದವು.
ಸದ್ಯ ಈ ಘಟನೆಗೆ ಸಂಬಂಧಿಸಿದಂತೆ ಬಸ್ ಗೆ ಬೆಂಕಿ ತಗುಲುತ್ತಿದ್ದಂತೆ ಪ್ರಯಾಣಿಕರು ಬಸ್ ನಿಂದ ಲಗುಬಗೆಯಿಂದ ಇಳಿಯುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಕೊನೆಯ ಪ್ರಯಾಣಿಕ ಇಳಿದ ಕೇವಲ 5 ಸೆಕೆಂಡ್ ನಲ್ಲಿ ಇಡೀ ಬಸ್ ಗೆ ಬೆಂಕಿ ವ್ಯಾಪಿಸಿದೆ. ಈ ಭಯಾನಕ ದೃಶ್ಯ ನೋಡುಗರನ್ನು ಬೆಚ್ಚಿಬೀಳಿಸಿದೆ.
Kshetra Samachara
09/04/2022 12:24 pm