ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಬಾಲಕನ ಶವ ನದಿಯಲ್ಲಿ ಪತ್ತೆ; ಕ್ರಿಕೆಟ್ ಆಡಲು ಹೋಗಿದ್ದ ದೃಶ್ಯಂತ್ ಜವರಾಯನ ತೆಕ್ಕೆಗೆ

ಮಂಗಳೂರು: ಶಂಕಾಸ್ಪದ ರೀತಿಯಲ್ಲಿ ಮೃತಪಟ್ಟ ಬಾಲಕನ ಶವ ನಗರದ ಹೊಯಿಗೆಬಜಾರ್ ಬಳಿಯ ನೇತ್ರಾವತಿ ನದಿಯಲ್ಲಿ ಪತ್ತೆಯಾಗಿದೆ.

ಮಹಾಕಾಳಿಪಡ್ಪು ನಿವಾಸಿ ಚೆನ್ನಪ್ಪ ಅವರ ಪುತ್ರ ದೃಶ್ಯಂತ್(16) ಮೃತಪಟ್ಟ ಬಾಲಕ. ನಗರದ ಪಾಂಡೇಶ್ವರದ ರೊಸಾರಿಯೋ ಶಾಲೆಯಲ್ಲಿ 9ನೇ ತರಗತಿ ವ್ಯಾಸಂಗ ಮಾಡುತ್ತಿದ್ದ ದೃಶ್ಯಂತ್‌, ರವಿವಾರ ಮನೆ ಬಳಿಯ ಮೈದಾನದಲ್ಲಿ ಆಟವಾಡಲು ಹೋಗಿದ್ದಾನೆ. ಗೆಳೆಯರೊಂದಿಗೆ ಕ್ರಿಕೆಟ್ ಆಡುತ್ತಿದ್ದ ಆತ ಆ ಬಳಿಕ ಮನೆಗೆ ಬಾರದೆ ನಾಪತ್ತೆಯಾಗಿದ್ದ.

ಈ ಬಗ್ಗೆ ಕಳವಳಗೊಂಡ ಹೆತ್ತವರು ಆತನ ಸ್ನೇಹಿತರಲ್ಲಿ ವಿಚಾರಿಸಿದ್ದಾರೆ. ಆದರೆ, ಅವರು ತಮಗೇನೂ ಗೊತ್ತಿಲ್ಲ ಎಂದಿದ್ದರು. ಆದ್ದರಿಂದ ದೃಶ್ಯಂತ್ ನಾಪತ್ತೆ ಬಗ್ಗೆ ಆತನ ತಾಯಿ ಆಶಾ ಪಾಂಡೇಶ್ವರ ಠಾಣೆಯಲ್ಲಿ ನಾಪತ್ತೆ ದೂರು ನೀಡಿದ್ದರು. ಸಂಜೆ ವೇಳೆ ದೃಶ್ಯಂತ್ ಮೃತದೇಹ ನದಿ ತೀರದಲ್ಲಿ ಪತ್ತೆಯಾಗಿದೆ.

ದೃಶ್ಯಂತ್ ಸ್ನಾನಕ್ಕಿಳಿದು ಮೃತಪಟ್ಟಿದ್ದಾನೆಯೇ ಅಥವಾ ಬೇರೇನಾದರೂ ಕೈವಾಡ ಇದೆಯೇ ಎನ್ನುವ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಪಾಂಡೇಶ್ವರ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಾಗಿದೆ.

Edited By : Nirmala Aralikatti
Kshetra Samachara

Kshetra Samachara

28/02/2022 10:26 pm

Cinque Terre

11.34 K

Cinque Terre

0

ಸಂಬಂಧಿತ ಸುದ್ದಿ