ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಲ್ಕಿ: ನಾಸಿಕ್‌ನಲ್ಲಿ ನಡೆದ ಅಪಘಾತದಲ್ಲಿ ಅಂಗರಗುಡ್ಡೆ ನಿವಾಸಿ ಸಾವು

ಮುಲ್ಕಿ: ಮುಲ್ಕಿ ಸಮೀಪದ ಅಂಗರಗುಡ್ಡೆ ಭಜನಾ ಮಂದಿರದ ಬಳಿಯ ನಿವಾಸಿ ಆದರ್ಶ ದಾಸ್ (30) ಮಹಾರಾಷ್ಟ್ರದ ನಾಸಿಕ್‌ನಲ್ಲಿ ನಡೆದ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ.

ಮೂಲತಃ ಮುಲ್ಕಿ ಬಳಿಯ ಅಂಗರಗುಡ್ಡೆ ನಿವಾಸಿಯಾಗಿದ್ದ ಆದರ್ಶ ದಾಸ್ ಕಳೆದ ಐದು ವರ್ಷಗಳಿಂದ ನಾಸಿಕ್‌ನಲ್ಲಿ ಪಾನ್ ಬೀಡಾ ಅಂಗಡಿ ನಡೆಸುತ್ತಿದ್ದರು. ಆದರೆ ಬುಧವಾರ ರಾತ್ರಿ 12 ಗಂಟೆ ಸುಮಾರಿಗೆ ಅಂಗಡಿ ಕೆಲಸ ಮುಗಿಸಿ ತಮ್ಮ ದ್ವಿಚಕ್ರ ವಾಹನದಲ್ಲಿ ಹೋಗುತ್ತಿರುವಾಗ ಅಪಘಾತ ಸಂಭವಿಸಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಮುಲ್ಕಿಯ ಅಂಗರಗುಡ್ಡೆಯಲ್ಲಿ ನೂತನ ಮನೆ ನಿರ್ಮಾಣವಾಗುತ್ತಿದ್ದು, ಮೃತ ಆದರ್ಶ ದಾಸ್ ಮನೆಯವರಿಗೆ ಆಧಾರ ಸ್ತಂಭವಾಗಿದ್ದ. ಅಂಗರಗುಡ್ಡೆ ಶ್ರೀರಾಮ ಭಜನಾ ಮಂದಿರದ ಸಕ್ರಿಯ ಕಾರ್ಯಕರ್ತನಾಗಿದ್ದ ಆದರ್ಶದಾಸ್ ಸಾಮಾಜಿಕ ಚಟುವಟಿಕೆಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು ಜನಾನುರಾಗಿಯಾಗಿದ್ದರು. ಆದರ್ಶ ದಾಸ್ ಅವರ ಇನ್ನೋರ್ವ ಸಹೋದರ ಅಭಿಲಾಶ್ ದಾಸ್ ಕಳೆದ ವರ್ಷದ ಹಿಂದೆ ಆತ್ಮಹತ್ಯೆ ಮಾಡಿಕೊಂಡಿದ್ದರು.

ಅವರ ಮೃತ ಶರೀರ ಶುಕ್ರವಾರ ಬೆಳಿಗ್ಗೆ ನಾಸಿಕ್‌ನಿಂದ ಅಂಗರಗುಡ್ಡೆಗೆ ಬರಲಿದ್ದು, ಅಂತ್ಯಸಂಸ್ಕಾರ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

Edited By : Vijay Kumar
Kshetra Samachara

Kshetra Samachara

27/01/2022 12:11 pm

Cinque Terre

7.37 K

Cinque Terre

0