ಮಂಗಳೂರು: ಕಾರುಗಳನ್ನು ಕೊಂಡೊಯ್ಯುತ್ತಿದ್ದ ಕಂಟೈನರ್ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಚರಂಡಿಗೆ ಜಾರಿ ಬಿದ್ದ ಘಟನೆ ಮಂಗಳೂರು ನಗರದ ಹೊರವಲಯದ ತೊಕ್ಕೊಟ್ಟು ಸಮೀಪದ ಕಾಪಿಕಾಡ್ ಎನ್‌ಎಚ್ 66 ರಲ್ಲಿ ನಡೆದಿದೆ.
ಸಿಸಿಟಿವಿ ದೃಶ್ಯಾವಳಿಗಳ ಪ್ರಕಾರ ಕಾರು ಚಾಲಕನ ನಿರ್ಲಕ್ಷ್ಯವು ಈ ಅಪಘಾತಕ್ಕೆ ಕಾರಣವಾಗಿದ್ದು, ಯಾವುದೇ ಸಿಗ್ನಲ್ ನೀಡದೆ ಎಡಕ್ಕೆ ಹಠಾತ್ ತಿರುವು ತೆಗೆದುಕೊಂಡಾಗ ಕಂಟೈನರ್ ಚಾಲಕ ಕಾರಿಗೆ ಢಿಕ್ಕಿಯಾಗುವುದನ್ನು ತಪ್ಪಿಸಲು ತನ್ನ ವಾಹನದ ನಿಯಂತ್ರಣವನ್ನು ಕಳೆದುಕೊಂಡಿದ್ದಾನೆ.
ನಾಗುರಿ ಟ್ರಾಫಿಕ್ ಪೊಲೀಸ್ ಠಾಣೆಯಿಂದ ಕ್ರೇನ್ ಮೂಲಕ ಟ್ರಕ್ ಮೇಲೆತ್ತಲಾಗಿದೆ. ಗಂಟೆಗಳ ಕಾಲ ಎನ್‌ಎಚ್ 66 ರಲ್ಲಿ ಸಂಚಾರಕ್ಕೆ ತೊಂದರೆಯಾಗಿತ್ತು. ಕಂಟೈನರ್ ಟ್ರಕ್ ಮುಂಬಯಿಯಿಂದ ಕಾಸರಗೋಡಿಗೆ ಹುಂಡೈ ಕಾರುಗಳನ್ನು ಸಾಗಿಸಲಾಗುತ್ತಿತ್ತು.
PublicNext
23/01/2022 05:53 pm