ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸುಳ್ಯ ಸ್ವಿಫ್ಟ್ ಕಾರು – ಟೋಯಿಂಗ್ ಟಾಟಾ ಝೆನಾನ್ ಮಧ್ಯೆ ಅಪಘಾತ : ಮೂವರಿಗೆ ಗಾಯ

ಸುಳ್ಯ : ತಾಲೂಕು ಕನಕಮಜಲು ಬಳಿ ಟೋಯಿಂಗ್ ಟಾಟಾ ಝೆನಾನ್ ಹಾಗೂ ಸ್ವಿಪ್ಟ್ ಕಾರಿನ ಮಧ್ಯೆ ಪರಸ್ಪರ ಡಿಕ್ಕಿ ಸಂಭವಿಸಿದೆ. ಅಪಘಾತದಲ್ಲಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಮೂವರು ಪ್ರಯಾಣಿಕರು ಗಾಯಗೊಂಡಿದ್ದಾರೆ.

ಮಂಗಳೂರಿನಿಂದ ಮೈಸೂರಿಗೆ ಅಪಘಾತವಾದ ಕಾರೊಂದನ್ನು ಕೊಂಡೊಯ್ಯುತ್ತಿದ್ದ ಟೋಯಿಂಗ್ ಟಾಟಾ ಝೆನಾನ್ ವಾಹನವು ಕೋಡಿ ತಿರುವಿಗೆ ತಲುಪುತ್ತಿದ್ದಂತೆ ವಾಹನದ ಬ್ರೇಕ್ ವೈಪಲ್ಯಗೊಂಡು ಮುಂಭಾಗದಿಂದ ಬರುತ್ತಿದ್ದ ಪೈಚಾರಿನ ಬದ್ರುದ್ಧೀನ್ ಎಂಬವರು ಚಲಾಯಿಸುತ್ತಿದ್ದ ಸ್ವಿಫ್ಟ್ ಕಾರಿಗೆ ಢಿಕ್ಕಿ ಹೊಡೆದ ಪರಿಣಾಮವಾಗಿ ಕಾರಿನಲ್ಲಿದ್ದ ಪೈಚಾರು ಮಸೀದಿಯ ಗುರುಗಳಾದ ಮುನೀರ್ ಹಾಗೂ ಪೈಚಾರ್ ನ ಅಶ್ರಫ್ ಎಂಬವರಿಗೆ ಗಾಯಗಳಾಗಿದ್ದು,ಸುಳ್ಯ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

Edited By : Nirmala Aralikatti
Kshetra Samachara

Kshetra Samachara

20/01/2022 07:48 pm

Cinque Terre

7.01 K

Cinque Terre

0

ಸಂಬಂಧಿತ ಸುದ್ದಿ