ಮುಲ್ಕಿ: ರಾಷ್ಟ್ರೀಯ ಹೆದ್ದಾರಿ 66ರ ಹಳೆಯಂಗಡಿ ಜಂಕ್ಷನ್ ಬಳಿ ಬೈಕ್ ಡಿಕ್ಕಿಯಾಗಿ ಪಾದಚಾರಿ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಗಾಯಾಳುವನ್ನು ಜೋನ್ ಕುಟಿನೋ (57) ಎಂದು ಗುರುತಿಸಲಾಗಿದೆ.
ಗಾಯಾಳು ಜೋನ್ ಕುಟಿನೋ ಕೂಲಿ ಕೆಲಸ ಮುಗಿಸಿಕೊಂಡು ಸಂಜೆ ವೇಳೆ ರಾಷ್ಟ್ರೀಯ ಹೆದ್ದಾರಿ ಹಳೆಯಂಗಡಿ ಜಂಕ್ಷನ್ ಸಮೀಪದ ಚೈನೀಸ್ ಫಾಸ್ಟ್ ಫುಡ್ ಬಳಿ ರಸ್ತೆ ದಾಟಿ ಇನ್ನೊಂದು ಬದಿಗೆ ತಲುಪುತ್ತಿದ್ದಂತೆ ಸುರತ್ಕಲ್ ಕಡೆಯಿಂದ ಮುಲ್ಕಿ ಕಡೆಗೆ ಹೋಗುತ್ತಿದ್ದ ಬೈಕ್ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ
ಅಪಘಾತದ ರಭಸಕ್ಕೆ ಜೋನ್ ಕುಟಿನೋ ತಲೆಗೆ, ಮೂಳೆಮುರಿತದ ಗಂಭೀರ ಗಾಯಗಳಾಗಿದ್ದು ಮುಖ ಆಸ್ಪತ್ರೆಗೆ ದಾಖಲಾಗಿದ್ದಾರೆ. ಬೈಕ್ ಸವಾರನ ವಿರುದ್ಧ ಸುರತ್ಕಲ್ ಉತ್ತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Kshetra Samachara
19/01/2022 10:46 pm