ಬೆಳ್ತಂಗಡಿ: ಕೆಲಸದ ವ್ಯಕ್ತಿಯನ್ನು ಮನೆಗೆ ಬಿಟ್ಟು ವಾಪಸ್ ಬರುತ್ತಿದ್ದಾಗ ತುಂಡಾಗಿ ಬಿದ್ದಿದ್ದ ವಿದ್ಯುತ್ ವೈಯರ್ ಕುತ್ತಿಗೆಗೆ ಸಿಲುಕಿ ರಸ್ತೆಗೆ ಎಸೆಯಲ್ಪಟ್ಟು ಸ್ಕೂಟರ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಬೆಳ್ತಂಗಡಿ ತಾಲೂಕಿನ ಹೆಡ್ಯಾದಲ್ಲಿ ಗುರುವಾರ ರಾತ್ರಿ ಈ ಘಟನೆ ನಡೆದಿದೆ.
ಉಜಿರೆಯಲ್ಲಿ ಶ್ರೀ ಗಣೇಶ್ ಹೊಟೇಲ್ ನಡೆಸುತ್ತಿದ್ದ ಬೆಳ್ತಂಗಡಿ ತಾಲೂಕಿನ ಕೊಯ್ಯೂರು ಗ್ರಾಮದ ಮಲೆಬೆಟ್ಟು ನಿವಾಸಿ ರಘು ಎಂಬವರು ತನ್ನ ಕೆಲಸದ ವ್ಯಕ್ತಿಯನ್ನು ಮನೆಗೆ ಬಿಡಲು ಹೋಗಿದ್ದು ನಂತರ ವಾಪಸ್ ಬರುವ ವೇಳೆ ಹೆಡ್ಯಾದಲ್ಲಿ ಪಿಕಪ್ ವಾಹನ ವಿದ್ಯುತ್ ಕಂಬಕ್ಕೆ ಗುರುವಾರ ರಾತ್ರಿ ಡಿಕ್ಕಿ ಹೊಡೆದು ಐದು ವಿದ್ಯುತ್ ಕಂಬ ರಸ್ತೆಗೆ ಬಿದ್ದಿತ್ತು ಇದರ ಬಗ್ಗೆ ಅರಿಯದ ರಘು ರಾತ್ರಿ ಸುಮಾರು 11:30 ಕ್ಕೆ ವಿದ್ಯುತ್ ವೈಯರ್ ಗೆ ಕುತ್ತಿಗೆ ಸಿಲುಕಿ ರಸ್ತೆಗೆ ಎಸೆಯಲ್ಪಟ್ಟು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ ಸ್ಥಳಕ್ಕೆ ಬೆಳ್ತಂಗಡಿ ಸಂಚಾರಿ ಪೊಲೀಸರು ಹಾಗೂ ಬೆಳ್ತಂಗಡಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಕಾನೂನು ಕ್ರಮ ಕೈಗೊಂಡಿದ್ದು ಈ ಬಗ್ಗೆ ಪ್ರಕರಣ ದಾಖಲಾಗಿದೆ.
Kshetra Samachara
07/01/2022 08:33 am