ಬಜಪೆ :ಮಂಗಳೂರು -ಮೂಡಬಿದ್ರಿ ರಾಷ್ಟ್ರೀಯ ಹೆದ್ದಾರಿಯ ಗುರುಪುರ ಸೇತುವೆ ಬಳಿ ಕಳೆದ ಡಿ. 30 ರ ಗುರುವಾರ ರಾತ್ರಿ ನಡೆದ ಎರಡು ಕಾರುಗಳ ಮುಖಾಮುಖಿ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಉಳಾಯಿಬೆಟ್ಟಿನ ಮಹಿಳೆ ಚಿಕಿತ್ಸೆಗೆ ಸ್ಪಂದಿಸದೆ ಮಂಗಳವಾರ ಮೃತಪಟ್ಟಿದ್ದಾರೆ.
ವಿವಾಹಿತ ಮಹಿಳೆ ಸಫಿಯಾ(32) ಮೃತಪಟ್ಟಟ್ಟವರು, ಗುರುಪುರ ಪೇಟೆಯಲ್ಲಿ ಮರಣ ಹೊಂದಿದ್ದ ಸಂಬಂಧಿಕರೊಬ್ಬರನ್ನು ಕಾಣಲೆಂದು ಇವರು ಇತರ ನಾಲ್ವರೊಂದಿಗೆ ಸ್ವಿಫ್ಟ್ ಕಾರಿನಲ್ಲಿ ಗುರುಪುರದತ್ತ ಬರುತ್ತಿದ್ದಾಗ ಮಂಗಳೂರಿನತ್ತ ಅತೀ ವೇಗ ಮತ್ತು ಅಜಾಗರೂಕತೆಯಿಂದ ಸಾಗುತ್ತಿದ್ದ ಇನ್ನೋವಾ ಕಾರು ಡಿಕ್ಕಿಯಾಗಿತ್ತು. ಅಪಘಾತದಲ್ಲಿ ಐವರಿಗೂ ಗಾಯವಾಗಿತ್ತು. ಗಂಭೀರ ಗಾಯಗೊಂಡವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಸಾಗಿಸುವಲ್ಲಿ ಸ್ಥಳೀಯ ಯುವಕರು ಮುಸ್ಲಿಂ ಬಾಂಧವರಿಗೆ ಸಹಕರಿಸಿದ್ದರು.
Kshetra Samachara
04/01/2022 08:35 pm