ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಎಡಪದವು:ಬಸ್ಸು ನಿಲ್ದಾಣಕ್ಕೆ ನುಗ್ಗಿದ ಪೊಲೀಸ್ ಜೀಪ್ -ಲೇಡಿ ಇನ್ಸ್ಪೆಕ್ಟರ್‌ಗೆ ಗಾಯ

ಬಜಪೆ:ಪೊಲೀಸ್ ಜೀಪೊಂದು ಬಸ್ಸು ನಿಲ್ದಾಣಕ್ಕೆ ನುಗ್ಗಿದ ಪರಿಣಾಮವಾಗಿ ಮಹಿಳಾ ಪೊಲೀಸ್ ಇನ್ಸ್ಪೆಕ್ಟರ್ ರೊಬ್ಬರು ಗಾಯಗೊಂಡ ಘಟನೆ ಎಡಪದವಿನ ವಿವೇಕಾನಂದ ಜೂನಿಯರ್ ಕಾಲೇಜು ಮುಂಭಾಗದ ಬಸ್ಸು ನಿಲ್ದಾಣದ ಬಳಿ ಇಂದು ಬೆಳಿಗ್ಗೆ ನಡೆದಿದೆ.

ಮಂಗಳೂರು ಪಾಂಡೇಶ್ವರ ಮಹಿಳಾ ಪೊಲೀಸ್ ಠಾಣೆಯಲ್ಲಿ ಇನ್ಸ್ಪೆಕ್ಟರ್ ಆಗಿರೋ ರೇವತಿ ಅವರು ಗಾಯಗೊಂಡಿದ್ದಾರೆ.ಘಟನೆಯಲ್ಲಿ ಪೊಲೀಸ್ ಜೀಪ್ ಜಖಂ ಗೊಂಡಿದ್ದು,ಬಸ್ಸು ನಿಲ್ದಾಣಕ್ಕೂ ಹಾನಿಯಾಗಿದೆ.ಘಟನಾ ಸ್ಥಳಕ್ಕೆ ಎಡಪದವು ಗ್ರಾಮ ಪಂಚಾಯತ್ ನ ಅಧ್ಯಕ್ಷ ಸುಕುಮಾರ್ ದೇವಾಡಿಗ ಹಾಗೂ ಸ್ಥಳೀಯರು ಗಾಯಗೊಂಡ ಇನ್ಸ್ಪೆಕ್ಟರ್ ರೇವತಿ ಅವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಿದ್ದಾರೆ.

Edited By :
Kshetra Samachara

Kshetra Samachara

03/01/2022 03:09 pm

Cinque Terre

6.55 K

Cinque Terre

0

ಸಂಬಂಧಿತ ಸುದ್ದಿ