ಪುತ್ತೂರು: ಐದು ಮಂದಿ ಪ್ರಯಾಣಿಸುತ್ತಿದ್ದ ಕಾರು ಪುತ್ತೂರು - ಪಾಣಾಜೆ ರಸ್ತೆಯ ಚೆಲ್ಯಡ್ಕದಲ್ಲಿ ಚಾಲಕನ ನಿಯಂತ್ರಣ ತಪ್ಪಿ ಸುಮಾರು 20 ಅಡಿ ಆಳದ ಕಂದಕಕ್ಕೆ ಉರುಳಿ ಬಿದ್ದಿದೆ. ಇಂದು ಬೆಳಗ್ಗೆ ಅವಘಡ ಸಂಭವಿಸಿದ್ದು, ಪ್ರಯಾಣಿಕರು ಪವಾಡಸದೃಶ್ಯವಾಗಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಬೆಟ್ಟಂಪಾಡಿ ಬಳಿಯ ಡೆಮ್ಮಂಗಾರದಿಂದ ಪುತ್ತೂರು ಕಡೆಗೆ ಹೊರಟಿದ್ದ ಆಲ್ಟೋ-800 ಕಾರು ಉಪ್ಪಳಿಗೆ ಸಮೀಪದ ಚೆಲ್ಯಡ್ಕ ಎಂಬಲ್ಲಿ ರಸ್ತೆಯ ಬದಿಯ ತೋಟಕ್ಕೆ ಉರುಳಿ ಬಿದ್ದಿದೆ. ತಿರುವಿನ ಬಳಿ ಚಾಲಕನ ಹತೋಟಿ ಕಳಕೊಂಡು ಅವಘಡ ಸಂಭವಿಸಿದೆ. ಕಾರಿನಲ್ಲಿ ಮಗು ಸಹಿತ ಐವರು ಪ್ರಯಾಣಿಸುತ್ತಿದ್ದರು. ಕಾರು ಕಂದಕಕ್ಕೆ ಉರುಳಿ ಬಿದ್ದ ವೇಳೆ ಪಲ್ಟಿಯಾಗಿತ್ತು. ಆದರೆ, ಅದೃಷ್ಟವಶಾತ್ ಎಲ್ಲರೂ ಸುರಕ್ಷಿತವಾಗಿದ್ದಾರೆ.
Kshetra Samachara
16/12/2021 11:42 am