ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪಾವಂಜೆ: ಟಯರ್ ಸ್ಫೋಟಗೊಂಡು ಮಿನಿ ಟೆಂಪೋ ಪಲ್ಟಿ; ಚಾಲಕ ಪಾರು

ಮುಲ್ಕಿ: ರಾಷ್ಟ್ರೀಯ ಹೆದ್ದಾರಿ 66ರ ಹಳೆಯಂಗಡಿ ಸಮೀಪದ ಪಾವಂಜೆ ಜಂಕ್ಷನ್ ಬಳಿ ಮಿನಿ ಟೆಂಪೋದ ಟಯರ್ ಸ್ಫೋಟಗೊಂಡು ಪಲ್ಟಿಯಾಗಿದ್ದು, ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಭಟ್ಕಳ ನಿವಾಸಿ ಸುಧಾಕರ ಕಾಮತ್ ಗಾಯಾಳು ಚಾಲಕ.ಭಟ್ಕಳದಿಂದ ಮಂಗಳೂರು ಕಡೆಗೆ ಪಾಮ್ ಆಯಿಲ್ ಹೇರಿಕೊಂಡು ಬರುತ್ತಿದ್ದ ಮಿನಿ ಟೆಂಪೋ ಪಾವಂಜೆ ಜಂಕ್ಷನ್ ತಲುಪುತ್ತಿದ್ದಂತೆಯೇ ಹಿಂದಿನ ಟಯರ್ ಸ್ಫೋಟಗೊಂಡು ಹೆದ್ದಾರಿಯಲ್ಲಿ ಪಲ್ಟಿಯಾಗಿದೆ.

ಅಪಘಾತದ ರಭಸಕ್ಕೆ ಟೆಂಪೋ ಜಖಂಗೊಂಡಿದ್ದು, ಚಾಲಕ ಸುಧಾಕರ ಕಾಮತ್ ಹಾಗೂ ಟೆಂಪೋದಲ್ಲಿದ್ದ ರಮೇಶ್ ಎಂಬವರು ಅಲ್ಪಸ್ವಲ್ಪ ಗಾಯಗಳೊಂದಿಗೆ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಅಪಘಾತದಿಂದ ಕೆಲಹೊತ್ತು ಹೆದ್ದಾರಿ ಸಂಚಾರ ವ್ಯತ್ಯಯ ಗೊಂಡಿದ್ದು, ಕೂಡಲೇ ಸ್ಥಳಕ್ಕೆ ಟ್ರಾಫಿಕ್ ಪೊಲೀಸರು ಹಾಗೂ ಟೋಲ್ ಸಿಬ್ಬಂದಿ ಧಾವಿಸಿ, ಪರಿಶೀಲನೆ ನಡೆಸಿ ಕ್ರೇನ್ ಮೂಲಕ ವಾಹನವನ್ನು ತೆರವುಗೊಳಿಸಲಾಯಿತು.

Edited By : Manjunath H D
Kshetra Samachara

Kshetra Samachara

02/12/2021 11:46 am

Cinque Terre

21.25 K

Cinque Terre

0

ಸಂಬಂಧಿತ ಸುದ್ದಿ